ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಾವತಿ ನೀರು ಬೆಂಗಳೂರಿಗೆ; ತುಘಲಕ್ ದರ್ಬಾರ್‌ನ ಸಂಕೇತ: ರಾಘವೇಶ್ವರ ಭಾರತೀ ಶ್ರೀ

Last Updated 14 ಜುಲೈ 2019, 20:00 IST
ಅಕ್ಷರ ಗಾತ್ರ

ಸಾಗರ: ‘ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಚನೆ ಸರ್ಕಾರಕ್ಕೆ ಬಂದಿರುವುದು ತುಘಲಕ್ ದರ್ಬಾರ್‌ನ ಸಂಕೇತವಾಗಿದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀ ಟೀಕಿಸಿದ್ದಾರೆ.

ಇಲ್ಲಿನ ರಾಘವೇಶ್ವರ ಭಾರತೀ ಸಭಾಭವನದಲ್ಲಿ ಭಾನುವಾರ ನಡೆದ ವಿಷ್ಣುಗುಪ್ತ ವಿಶ್ವವಿದ್ಯಾ ಪೀಠದ ಮಾರ್ಗದರ್ಶನ ಸಭೆಯಲ್ಲಿ ಮಾತನಾಡಿದ ಅವರು, ‘ಶರಾವತಿ ಯೋಜನೆಗೆ ಶ್ರೀಮಠದ ವಿರೋಧವಿದೆ. ಸರ್ಕಾರ ಈ ದಿಕ್ಕಿನಲ್ಲಿ ಒಂದು ಹೆಜ್ಜೆ ಮುಂದಿಟ್ಟರೆ ಶ್ರೀ ಮಠದ ಕಾರ್ಯಕರ್ತರು ಅದನ್ನು ವಿರೋಧಿಸಲು ನೂರು ಹೆಜ್ಜೆ ಮುಂದಿಡುತ್ತಾರೆ’ ಎಂದು ಎಚ್ಚರಿಸಿದರು.

‘ಆಯಾ ಭಾಗದ ಸಂಪನ್ಮೂಲಗಳು ಆಯಾ ಭಾಗದಲ್ಲೇ ಸದ್ಬಳಕೆಯಾಗಬೇಕು. ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವುದು ಎಂದರೆ ನಿಸರ್ಗದ ಮೇಲೆ ದೌರ್ಜನ್ಯ ನಡೆಸಿದಂತೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT