ಐ ಕ್ಯಾಟ್ ಏರ್ ಅಂಬುಲೆನ್ಸ್‌ನಲ್ಲಿ ಚೆನ್ನೈಗೆ ಸ್ವಾಮೀಜಿ

7

ಐ ಕ್ಯಾಟ್ ಏರ್ ಅಂಬುಲೆನ್ಸ್‌ನಲ್ಲಿ ಚೆನ್ನೈಗೆ ಸ್ವಾಮೀಜಿ

Published:
Updated:

ತುಮಕೂರು: ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಮತ್ತಷ್ಟು ಸುಧಾರಣೆಗೆ ಚೆನ್ನೈನ ಡಾ. ರೇಲಾ ಇಂಟರ್ ನ್ಯಾಷನಲ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್‌ಗೆ ಕರೆದುಕೊಂಡು ಹೋಗಲಾಗುವುದು. ಮಠದಿಂದ ಬೆಳಿಗ್ಗೆ 10.30ಕ್ಕೆ ಸ್ವಾಮೀಜಿ ಹೊರಟಿದ್ದು, ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಐ ಕ್ಯಾಟ್ ಏರ್ ಅಂಬುಲೆನ್ಸ್‌ನಲ್ಲಿ ಮಧ್ಯಾಹ್ನ 12.30ಕ್ಕೆ ತೆರಳಲಿದ್ದಾರೆ.

ಸ್ವಾಮೀಜಿ ಅವರೊಂದಿಗೆ ಸಿದ್ಧಗಂಗಾ ಆಸ್ಪತ್ರೆಯ ಡಾ. ಪರಮೇಶ್, ಸ್ವಾಮೀಜಿ ಆರೈಕೆದಾರ ಮಲ್ಲಾರಾಧ್ಯ ಅವರು ಏರ್ ಅಂಬುಲೆನ್ಸ್‌ನಲ್ಲಿ ತೆರಳಲಿದ್ದಾರೆ.


ಡಾ. ಶಿವಕುಮಾರವಸ್ವಾಮೀಜಿ ಮಠದಿಂದ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಹೊರಟ ಕ್ಷಣ

ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಶಿಪ್ಟ್ ಮಾಡಿದ ಅನುಭವ ಇದೆ: ಶಾಲಿನಿ ನಾಲ್ವಾಡ್

ವಿದೇಶದಲ್ಲಿ ತರಬೇತಿ ಪಡೆದು ಬೆಂಗಳೂರಿನಲ್ಲಿ ಐ ಕ್ಯಾಟ್ ಏರ್ ಅಂಬುಲೆನ್ಸ್ ಆರಂಭಿಸಿದ್ದೇವೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಸುರಕ್ಷಿತವಾಗಿ ಸಾಗಿಸಿದ ಅನುಭವ ಇದೆ ಎಂದು ಐ ಕ್ಯಾಟ್ ಏರ್ ಅಂಬುಲೆನ್ಸ್ ಮುಖ್ಯಸ್ಥೆ ಶಾಲಿನಿ ನಾಲ್ವಾಡ್ ಮಾಧ್ಯಮದವರಿಗೆ ತಿಳಿಸಿದರು.

ಐಸಿಯುನ ಎಲ್ಲ ವ್ಯವಸ್ಥೆ ಏರ್ ಅಂಬುಲೆನ್ಸ್‌ನಲ್ಲಿ ಇದೆ. ಇಬ್ಬರು ವೈದ್ಯರು ಒಬ್ಬ ಸಹಾಯಕರು ಅಂಬುಲೆನ್ಸ್‌ನಲ್ಲಿ ಇರಲಿದ್ದಾರೆ ಎಂದರು.

ಸ್ವಾಮೀಜಿ ಅವರನ್ನು ಮಠದಿಂದ ಆಸ್ಪತ್ರೆಯ ಬೆಡ್‌ವರೆಗೂ ಕರೆದುಕೊಂಡು ಹೋಗುವ ಜವಾಬ್ದಾರಿ ನಮ್ಮದು ಎಂದರು.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !