ಬುಧವಾರ, ಏಪ್ರಿಲ್ 21, 2021
25 °C

ಸಿಂದಗಿ ಪುರಸಭೆ ಚುನಾವಣೆ: 11ರಲ್ಲಿ ಕಾಂಗ್ರೆಸ್ ಗೆಲುವು, ಜೆಡಿಎಸ್‌ಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ (ವಿಜಯಪುರ): ಸಿಂದಗಿ ಪುರಸಭೆ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, 23 ಸ್ಥಾನಗಳ ಪೈಕಿ ಕಾಂಗ್ರೆಸ್ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಜೆಡಿಎಸ್ ಕೇವಲ 6 ಸ್ಥಾನಗಳು ಪಡೆದುಕೊಂಡಿವೆ. ಬಿಜೆಪಿ ಕಳೆದ ಬಾರಿ ಗೆದ್ದಿದ್ದ 3 ಸ್ಥಾನಗಳನ್ನು ಉಳಿಸಿಕೊಂಡಿದೆ. ಮೂವರು ಪಕ್ಷೇತರರು ಚುನಾಯಿತರಾಗಿದ್ದಾರೆ. ಬಹುಮತಕ್ಕೆ 12 ಸ್ಥಾನಗಳು ಬೇಕಿವೆ. ಪಕ್ಷೇತರರಲ್ಲಿ 21 ನೇ ವಾರ್ಡನಲ್ಲಿ ಆಯ್ಕೆಯಾಗಿರುವ ಗೊಲ್ಲಾಳಪ್ಪ ಬಂಕಲಗಿ ಕಾಂಗ್ರೆಸ್ಸಿಗರೇ ಆಗಿದ್ದು ಟಿಕೆಟ್ ವಂಚಿತರಾಗಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷ ಪಕ್ಷೇತರ ಅಭ್ಯರ್ಥಿ ನೆರವಿನಿಂದ ಅಧಿಕಾರ ಗದ್ದುಗೆ ಏರುವ ನಿರೀಕ್ಷೆ ಇದೆ.

13ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ, ಶಾಸಕ ಎಂ.ಸಿ.ಮನಗೂಳಿ ಪುತ್ರ ಡಾ.ಶಾಂತವೀರ ಮನಗೂಳಿ ಗೆಲುವು ಸಾಧಿಸಿದ್ದಾರಾದರೂ, ಅಧ್ಯಕ್ಷ ಸ್ಥಾನದ ಕನಸು ಛಿದ್ರಗೊಂಡಿದೆ. ಪ್ರಸ್ತುತ ಚುನಾವಣೆಯಲ್ಲಿ ಮನಗೂಳಿ ಕುಟುಂಬಕ್ಕೆ ಭಾರಿ ಮುಖಭಂಗವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು