ಭಾನುವಾರ, ಆಗಸ್ಟ್ 25, 2019
20 °C

ತೀರ್ಥಹಳ್ಳಿ | ಪ್ರವಾಹ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್, ಮುಖ್ಯಮಂತ್ರಿ ಭರವಸೆ

Published:
Updated:

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಥಹಳ್ಳಿ ತಾಲ್ಲೂಕಿನ ಹೆಗಲತ್ತಿ ಸೇರಿದಂತೆ ವಿವಿಧೆಡೆ ಮಂಗಳವಾರ ಮುಂಜಾನೆ ಪ್ರವಾಹ ಪೀಡಿತ ಪ್ರದೇಶಗಳನ್ನು ಅವಲೋಕಿಸಿದರು.

ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಸರ್ಕಾರ ಶೀಘ್ರ ವಿಶೇಷ ಪ್ಯಾಕೇಜ್ ಘೋಷಿಸಲಿದೆ’ ಎಂದರು.

‘ಪ್ರವಾಹದಿಂದ ಆಗಿರುವ ಹಾನಿಯ ಅಂದಾಜು ಮಾಡಿ ಶೀಘ್ರ ವರದಿ ಸಲ್ಲಿಸಬೇಕು’ ಎಂದು ಇದೇ ಸಂದರ್ಭ ಜಿಲ್ಲಾಡಳಿತಕ್ಕೆ ಸೂಚಿಸಿದರು. ‘ಬೆಳೆನಷ್ಟವಾಗಿರುವ ರೈತರು ಕಂಗೆಡಬೇಕಿಲ್ಲ. ರೈತರ ಹಿತ ಕಾಡಲು ಸರ್ಕಾರ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.

ಆರೋಗ್ಯ ಇಲಾಖೆ ಮುಂಜಾಗ್ರತೆ
ಜಿಲ್ಲೆಯಲ್ಲಿ ಪ್ರವಾಹ ಇಳಿಮುಖವಾಗಿದೆ. ಇದೀಗ ವೈದ್ಯರ ತಂಡ ಹಾಗೂ ಆಶಾ ಕಾರ್ಯಕರ್ತೆಯರು ಹಳ್ಳಿಗಳಿಗೆ ತೆರಳಿ ಒಆರ್‌ಎಸ್ ಮತ್ತು ಹ್ಯಾಲೋಜನ್ ಮಾತ್ರೆ ವಿತರಿಸುತ್ತಿದ್ದಾರೆ. ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಅಲ್ಲಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗುತ್ತಿದೆ.

ಇದನ್ನೂ ಓದಿ... ಸತತ ಮಳೆ: ಅಪಾಯದ ಮಟ್ಟ ಮೀರಿದ ಗಂಗಾವಳಿ, ಗ್ರಾಮಸ್ಥರಿಂದ ಮೊಸಳೆ ಸೆರೆ


ಚಿಕ್ಕಮಗಳೂರು ತಾಲ್ಲೂಕಿನ ಗಿರಿಶ್ರೇಣಿಯ ಬಾಬಾಬುಡನ್ ಗಿರಿ ಮಾರ್ಗದ ಮಹಲ್ ಬಳಿ ಗುಡ್ಡದ ಮಣ್ಣು ರಸ್ತೆಗೆ ಅಡ್ಡಲಾಗಿ ಕುಸಿದಿದೆ.

 

Post Comments (+)