ಬಾಗಲಕೋಟೆ: ಸುದೀರ್ಘ ಅವಧಿಯ ನಂತರ ಜಿಲ್ಲೆಯಲ್ಲಿ ಒಂದೇ ದಿನ ಕೋವಿಡ್–19 ಸೋಂಕಿತರು ದೃಢಪಟ್ಟ ಸಂಖ್ಯೆ ಎರಡಂಕಿ ತಲುಪಿದೆ. ಭಾನುವಾರ ಒಟ್ಟು 14 ಮಂದಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದ ಮುಧೋಳದ 16 ವರ್ಷದ ಬಾಲಕನಿಗೂ ಸೋಂಕು ತಗುಲಿದೆ. ಬಾಲಕನಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.

ಮುಧೋಳದ ಸೋಂಕಿತ ವ್ಯಕ್ತಿಯ (ಪಿ–7547) ಸಂಪರ್ಕಕ್ಕೆ ಬಂದ ಎಂಟು ಮಂದಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ವ್ಯಕ್ತಿಯ ಕುಟುಂಬದ ನಾಲ್ವರು, ಅಕ್ಕಪಕ್ಕದ ಮನೆಯವರು ಸೇರಿದ್ದಾರೆ. ಇವರಲ್ಲಿ ಆರು ಹಾಗೂ 12 ವರ್ಷದ ಬಾಲಕಿಯರು, 16 ವರ್ಷದ ಬಾಲಕ, 36 ವರ್ಷದ ಮಹಿಳೆ, 45 ವರ್ಷದ ಮಹಿಳೆ, 53 ವರ್ಷದ ಪುರುಷ, 55 ವರ್ಷದ ಮಹಿಳೆ ಹಾಗೂ 56 ವರ್ಷದ ಪುರುಷ ಸೇರಿದ್ದಾರೆ.

ಉಳಿದ ಆರು ಮಂದಿಯಲ್ಲಿ ಬಾಗಲಕೋಟೆಯ 50 ವರ್ಷದ ಮಹಿಳೆ ಹಾಗೂ ಜಮಖಂಡಿಯ ಪುರುಷ ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದಾರೆ. ಬಾಗಲಕೋಟೆಯ ನವನಗರದ ಸೆಕ್ಟರ್ ನಂ 36ರಲ್ಲಿ ವಾಸವಿರುವ 25 ವರ್ಷದ ಯುವತಿ, 58 ವರ್ಷದ ಮಹಿಳೆ, 33 ವರ್ಷದ ಪುರುಷ ಹಾಗೂ ಐದು ತಿಂಗಳ ಮಗು ಸೋಂಕು ದೃಢಪಟ್ಟಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ. ಇವರಲ್ಲಿ 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದು, 100 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.