ಮಂಗಳವಾರ, ಫೆಬ್ರವರಿ 18, 2020
26 °C

ತುಮಕೂರು: ಈಜಲು ಹೋಗಿ ಮೂವರು ವಿದ್ಯಾರ್ಥಿಗಳು ನೀರುಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಬ್ಬಿ(ತುಮಕೂರು): ಗುಬ್ಬಿ ತಾಲ್ಲೂಕಿನ ಅಮಾನಿಕೆರೆಯಲ್ಲಿ ಈಜಲು ಹೋಗಿ ಶ್ರೀನಿವಾಸ್, ದರ್ಶನ್ ಮತ್ತು ನಂದನ್ ಎಂಬ ಪ್ರೌಢಶಾಲಾ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 

ಮೂವರು ಸಮಾಜ ಕಲ್ಯಾಣ ಇಲಾಖೆ ನಡೆಸುವ ವಸತಿ ನಿಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಡುತ್ತಿದ್ದರು. ಶ್ರೀನಿವಾಸ್ 9ನೇ ತರಗತಿಯಲ್ಲಿ ಓದುತ್ತಿದ್ದರೆ, ಉಳಿದಿಬ್ಬರು 8 ನೇ ತರಗತಿಯಲ್ಲಿ ಕಲಿಯುತ್ತಿದ್ದರು.

ಬೆಳಗಿನ ತಿಂಡಿ ಮಾಡಿಕೊಂಡು ವಸತಿ ನಿಲಯದಿಂದ ಸುಮಾರು ಒಂದು ಕಿ.ಮೀ. ದೂರದ ಶಾಲೆಯಡೆಗೆ ಇವರು ಹೊರಟರೂ, ಆದರೆ ತರಗತಿಗಳಿಗೆ ಹಾಜರಾಗಲಿಲ್ಲ. ಮಧ್ಯಾಹ್ನ ಮತ್ತಿಬ್ಬರು ಸ್ನೇಹಿತರನ್ನು ಜತೆ ಮಾಡಿಕೊಂಡು ಸುಮಾರು ಮೂರು ಕಿ.ಮೀ.ದೂರ ಇರುವ ಕೆರೆಗೆ ಹೋಗಿದ್ದಾರೆ. 

ಮೂವರು ಕೆರೆಗೆ ದುಮುಕಿದ್ದಾರೆ. ಬಹಳ ಹೊತ್ತಿನ ವರೆಗೂ ಅವರು ನೀರಿಂದ ಮೇಲೆ ಬರದಿದ್ದಾಗ, ಉಳಿದಿಬ್ಬರು ಚೀರಿಕೊಂಡು, ಗೋಳಾಡುತ್ತ ಸುತ್ತಲಿನ ಜನರನ್ನು ಸೇರಿಸಿದರು. ಆ ಬಳಿಕ ಹುಡುಕಾಟ ನಡೆಸಿ, ಶವಗಳನ್ನು ಹೊರ ತೆಗೆಯಲಾಯಿತು ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ಮಾರುತಿನಗರದ ವಾಸಿ ಅಶ್ವತಯ್ಯ ಅವರ ಮಗ ಶ್ರೀನಿವಾಸ್. ನಂದನ್ ಗುಬ್ಬಿ ತಾಲ್ಲೂಕಿನ ಕಲ್ಲೆನಹಳ್ಳಿಯವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು