ಮಂಗಳವಾರ, ಜನವರಿ 28, 2020
22 °C
ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವ

ವಂಶವೃಕ್ಷ ಮಾಡಿಸಿಕೊಳ್ಳಲು ಗಲಾಟೆ ಯಾಕೆ: ವಿರೇಶಾನಂದ ಸರಸ್ವತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಇವತ್ತು ನಮ್ಮ ದೇಶ ತನ್ನದೆ ಆದ ವಂಶವೃಕ್ಷ ಮಾಡಿಕೊಳ್ಳಲು ಹೊರಟಿದೆ. ಅದಕ್ಕೆ ಗಲಾಟೆ ಮಾಡುವುದು ಸರಿಯಲ್ಲ ಎಂದು ತುಮಕೂರಿನ ರಾಮಕೃಷ್ಣ–ವಿವೇಕಾನಂದ ಆಶ್ರಮದ ಅಧ್ಯಕ್ಷ ವಿರೇಶಾನಂದ ಸರಸ್ವತಿ ಹೇಳಿದರು.

ಇವತ್ತು ನೋಡ್ತಾ ಇದ್ದಿರಿ, ಯಾರು ನಮ್ಮ ದೇಶದ ಧ್ವಜಕ್ಕೆ ಕೈ ಮುಗಿಯುತ್ತಿರಲಿಲ್ಲವೋ, ರಾಷ್ಟ್ರಗೀತೆಗೆ ನಿಂತುಕೊಳ್ಳುತ್ತಿರಲಿಲ್ಲವೋ, ಅವರೆಲ್ಲ ನಾವು ಭಾರತೀಯರು ಎಂದು ಧ್ವಜ ಹಿಡಿದುಕೊಂಡಿದ್ದಾರೆ. ಇಷ್ಟು ದಿನ ಎಲ್ಲೆಲ್ಲಿ ಇಟ್ಟಿದ್ದರೋ, ಈಗ ಎಲ್ಲ ಆಚೆಗೆ ಬಂದು ಬಿಡ್ತು. ಹುತ್ತದೊಳಗಿನ ಹುಳುಗಳ ತರಹ ಆಚೆ ಬಂದಿದ್ದಾರೆ ಎಂದು ಅವರು ಹೇಳಿದರು

ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ವಾಮಿ ವಿವೇಕಾನಂದ ಅವರ ಜನ್ಮದಿನೋತ್ಸವದ ನೆನಪಿನ ರಾಷ್ಟ್ರೀಯ ಯುವ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ನಾನು ನನ್ನ ವಂಶವೃಕ್ಷವನ್ನು ಕೇಳಿದೆ ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ. ನಮ್ಮ ಅಜ್ಜ ಅದನ್ನು ಮಾಡಿಸಿರಲಿಲ್ಲ. ನಮ್ಮ ತಂದೆ ಕಾಲದಲ್ಲಿಯೂ ಮಾಡಿಸಿರಲಿಲ್ಲ. ನನ್ನ ಕಾಲದಲ್ಲಿ ಅದನ್ನು ಮಾಡಿಸಿದೆ. ಜಿಲ್ಲಾಧಿಕಾರಿ ನನಗೆ ಹೇಳಿದರೂ ಹಿಂದಿನವರು ಮಾಡಿದ ತಪ್ಪನ್ನ ನೀವು ಮಾಡಬೇಡಿ. ಇವತ್ತು ನಮ್ಮ ದೇಶ ತನ್ನದೆ ಆದ ವಂಶವೃಕ್ಷ ಮಾಡಿಕೊಳ್ಳಲು ಹೊರಟಿದೆ ಅಂದ್ರೆ ಗಲಾಟೆ ಮಾಡಬೇಕಾ ಎಂದು ಅವರು ಪ್ರಶ್ನಿಸಿದರು.

ನಾವು ಶ್ರೇಷ್ಠ ದೇಶ, ನಾಗರಿಕತೆಗೆ ಸೇರಿದವರು. ‘ಭಾರತೀಯ ತತ್ವಶಾಸ್ತ್ರವು ಸಾರ್ವತ್ರಿಕ ದೃಷ್ಟಿಕೋನವನ್ನು ಹೊಂದಿದೆ. ಭಾರತೀಯರು ಎಂದಿಗೂ ಜನಾಂಗೀಯ ಮೌಲ್ಯಗಳನ್ನು ಗೌರವಿಸಲಿಲ್ಲ, ಏಕೆಂದರೆ ಜನಾಂಗೀಯ ಮೌಲ್ಯಗಳು ಸಾರ್ವತ್ರಿಕವಲ್ಲ’ ಎಂದು ಮಹಾನ್‌ ತತ್ವಜ್ಞಾನಿಗಳೇ ಹೇಳಿದ್ದಾರೆ ಎಂದು ನೆನಪಿಸಿದರು.

ಇವತ್ತು ಇಂಡಿಯಾದಲ್ಲಿ ನೋಡುತ್ತಿದ್ದಿರಿ, ಸಾವಿರ ವರ್ಷದಿಂದ ಎರಡೂವರೇ ಲಕ್ಷ ಮಸೀದಿಗಳು ಕಟ್ಟಲ್ಪಟ್ಟಿವೆ. ಜಗತ್ತಿನ 200ಕ್ಕೂ ಹೆಚ್ಚು ದೇಶಗಳಲ್ಲಿ ಇರುವ ಒಟ್ಟು ಮಸೀದಿಗಳಿಂದ ಹೆಚ್ಚು ಮಸೀದಿಗಳು ಭಾರತ ಒಂದರಲ್ಲೆ ಜಾಸ್ತಿ ಮಸೀದಿಗಳಿವೆ. ಈ ದೇಶದಲ್ಲಿ ಚರ್ಚ್‌ ಕಟ್ಟಲು 50 ವರ್ಷದಿಂದ ಸಾಕಷ್ಟು ಅವಕಾಶ ಸಿಗುತ್ತಿದೆ. ಎಲ್ಲ ಪರಂಪರೆಯ ಪ್ರಾರ್ಥನ ಜಾಗಗಳಿವೆ ಎಂದರು.

ಹಾಗಾದರೆ ದೇಶದಲ್ಲಿ ಅಸಹಿಷ್ಣತೆ ಇದೆಯಾ, ಅದು ಮುಂಬೈನಲ್ಲಿನ ಚಲನಚಿತ್ರ ಸಂಸ್ಥೆಯಲ್ಲಿ ಇರಬಹುದು. ಅಲ್ಲಿನವರು ಕಾರದ ಊಟ ಮಾಡಿರುತ್ತಾರೆ ಹಿಂದಿನ ದಿನ. ಅವರಿಗೆ ಅಸಿಡಿಟಿ ಬರುತ್ತೆ. ನಮ್ಮ ವಿಶ್ವವಿದ್ಯಾನಿಲಯಗಳು ಜೀವನ ಕಟ್ಟಿಕೊಡುವ ದೇವಾಲಯಗಳು. ಅಲ್ಲಿ ನಾವು ಅಧ್ಯಯನಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಅವರು ಸಲಹೆ ನೀಡಿದರು.

ಶಾಸಕ ಜಿ.ಬಿ.ಜ್ಯೊತಿಗಣೇಶ್‌ ಮಾತನಾಡಿ, ಯುವಕರಿಗೆ ರಾಷ್ಟ್ರೀಯತೆಯನ್ನು ನೆನಪಿಸಬೇಕಾದ ಸ್ಥಿತಿ ಬಂದಿದೆ. ಇಂದು ದೇಶದಲ್ಲಿ ನೋಡುತ್ತಿದ್ದಿರಿ, ವಿಶ್ವವಿದ್ಯಾಲಯಗಳಲ್ಲಿ ಓದುವುದನ್ನು ಬಿಟ್ಟು ವಿದ್ಯಾರ್ಥಿಗಳು ತಪ್ಪುದಾರಿ ಹಿಡಿಯುತ್ತಿದ್ದಾರೆ. ಬೇರೆಯವರಿಗೂ ದಾರಿ ತಪ್ಪಿಸುತ್ತಿದ್ದಾರೆ. ಆ ರೀತಿ ಮಾಡಬಾರದು ಎಂದರು.

ನಾವೆಲ್ಲ ಬದುಕಬೇಕು. ಬೇರೆಯವರನ್ನು ಸ್ವಾಗತಿಸಬೇಕು ಎಂದು ಮೋದಿ ಅವರು ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವುಗಳನ್ನು ಯುವಸಮೂಹ ಬೆಂಬಲಿಸಬೇಕು ಎಂದು ಕಿವಿಮಾತು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು