ಧಾರವಾಡ: ‘ಸಮಾಜಕ್ಕೆ ಒಗ್ಗಟ್ಟಿನ ಮಂತ್ರ ಬೋಧಿಸಬೇಕಾದ ಸ್ವಾಮೀಜಿಗಳು ಕ್ಷುಲ್ಲಕ ಕಾರಣಕ್ಕೆ ಬೇರೆ ಬೇರೆ ಆದರೆ ಬುದ್ಧಿ ಹೇಳುವವರು ಯಾರು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್.ತಿಪ್ಪಣ್ಣ ಪ್ರಶ್ನಿಸಿದರು.

ಮಹಾಸಭಾದ ರಾಜ್ಯ ಘಟಕ ಮತ್ತು ಧಾರವಾಡ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ರಾಜ್ಯ ಮಟ್ಟದ ವಿಶೇಷ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೂಡಲಸಂಗಮದಲ್ಲಿ ಪಂಚಪೀಠ ಹಾಗು ವಿರಕ್ತ ಮಠದ ಸುಮಾರು 500ಕ್ಕೂ ಹೆಚ್ಚು ಸ್ವಾಮೀಜಿಗಳು ನಾವೆಲ್ಲರೂ ಒಂದು ಎಂದು ಪ್ರಮಾಣ ಮಾಡಿದ್ದರು. ಆದರೆ ಮತ್ತವೇ ಭಿನ್ನಾಭಿಪ್ರಾಯಗಳಿಂದ ದೂರವಾಗಿದ್ದಾರೆ. ‘ಇವನಾರವ, ಇವನಾರವ...’ ಎಂದು ವಚನ ಉಲ್ಲೇಖಿಸುವವರು, ಸಮಾಜವನ್ನು ಒಗ್ಗೂಡಿಸಿ ಮುಂದೆ ಕರೆದೊಯ್ಯಲು ಏನು ಕ್ರಮ ಕೈಗೊಂಡಿದ್ದಾರೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಾವು ದಾರಿ ತಪ್ಪಿದರೆ ನಮ್ಮನ್ನು ಸರಿದಾರಿಗೆ ತರಬೇಕಾದವರೇ ಪ್ರತ್ಯೇಕ ದಾರಿ ತುಳಿಯುತ್ತಿದ್ದಾರೆ. ಇದನ್ನೇ ಕೆಲ ರಾಜಕಾರಣಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ 90ರಿಂದ 95ರಷ್ಟು ವೀರಶೈವ ಲಿಂಗಾಯತ ಸಮಾಜದ ಶಾಸಕರು ಇರುತ್ತಿದ್ದರು. ಈಗಆ ಸಂಖ್ಯೆ 50ರ ಆಸುಪಾಸಿಗೆ ಕುಸಿದಿದೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕಮತ್ತು ಆರ್ಥಿಕವಾಗಿ ಸಬಲರಾಗಬೇಕು. ಅದಕ್ಕೆ ಸದಸ್ಯರ ಸಂಖ್ಯೆ ಮತ್ತು ದಾನಿಗಳು ಹೆಚ್ಚಾಗಬೇಕು’ ಎಂದರು.

‘ಬೆಂಗಳೂರಿನಲ್ಲಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಿಸಲಾಗುತ್ತಿದೆ. ಪ್ರತಿ ಕೊಠಡಿಗೆ ₹4 ಲಕ್ಷ ಖರ್ಚಾಗಬಹುದು. ದೇಣಿಗೆ ನೀಡಿದವರ ಅಥವಾ ಸಂಘಟನೆಯ ಹೆಸರನ್ನು ಕೊಠಡಿಗೆ ಇಡಲಾಗುವುದು’ ಎಂದು ತಿಪ್ಪಣ್ಣ ಹೇಳಿದರು.

ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಂಕರ ಬಿದರಿ ಮಾತನಾಡಿ, ‘ಲಿಂಗಾಯತ ವೀರಶೈವ ಪ್ರಭೇದ ಬೇರೆ ಆದರೂ ತಾತ್ವಿಕವಾಗಿ ಒಂದೇ. ಸಮಾಜವನ್ನು ಬಲಿಷ್ಠಗೊಳಿಸಬೇಕೆಂದರೆ ಸಂಘಟನೆ ಮತ್ತು ಆರ್ಥಿಕ ಸಾಮರ್ಥ್ಯ ಹೆಚ್ಚಳವಾಗಬೇಕು. ಇದಕ್ಕೆ ಸಮಾಜದ ಪ್ರತಿಯೊಬ್ಬರೂ ತಮ್ಮ ಆದಾಯದ ಶೇ 2ರಷ್ಟಾದರೂ ಸಮಾಜಕ್ಕೆ ನೀಡಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಒಂದಾಗಬೇಕಾದರೆ ಸಮಾಜದೊಳಗಿನ ಒಳಪಂಗಡಗಳ ನಡುವಿನ ಅಂತರವನ್ನು ಸಂಬಂಧಗಳ ಮೂಲಕ ಅಂತ್ಯಗೊಳಿಸಬೇಕು' ಎಂದು ಕರೆ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ, ಶಿವಶರಣ ಕಲಬಶೆಟ್ಟರ, ನಟರಾಜ ಸಾಗರನಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.