ಶನಿವಾರ, ಏಪ್ರಿಲ್ 4, 2020
19 °C

ಕೋವಿಡ್-19: ತಲಕಾವೇರಿಯಲ್ಲಿ ಭಕ್ತರ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ಪುಣ್ಯಕ್ಷೇತ್ರ ಭಾಗಮಂಡಲ ಹಾಗೂ ತಲಕಾವೇರಿಗಳಿಗೆ ಕೋವಿಡ್ 19 ರ ಬಿಸಿ ತಟ್ಟಿದೆ,ಕೊರೊನಾ ಭೀತಿಯಿಂದಾಗಿ ಪ್ರವಾಸಿಗೆ ಸಂಖ್ಯೆ ದಿಡೀರ್ ಇಳಿಮುಖಗೊಂಡಿದೆ.

ಭಾಗಮಂಡಲದಲ್ಲಿ ಶನಿವಾರ ಯಾತ್ರಾಥಿಗಳ ಸಂಖ್ಯೆ ಕಡಿಮೆ ಇತ್ತು.ತಲಕಾವೇರಿ ಕ್ಷೇತ್ರವೂ ಭಣಗುಡುತ್ತಿತ್ತು.

ಜಿಲ್ಲೆಯ ಕೆಲವು ಯಾತ್ರಾರ್ಥಿಗಳು ಭಾಗಮಂಡಲಕ್ಕೆ ಭೇಟಿ ನೀಡಿ ಪಿಂಡಪ್ರದಾನದಂತಹ ತುರ್ತು ಕಾರ್ಯಗಳನ್ನು ನೆರವೇರಿಸಿದರು. ವಾರಾಂತ್ಯದಲ್ಲಿ ಅಧಿಕ ಸಂಖ್ಯೆಯ ಯಾತ್ರಾರ್ಥಿಗಳು ಕಂಡುಬರುತ್ತಿದ್ದರು.

ಹೊರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯ ವಾಹನಗಳು ಆಗಮಿಸುತ್ತಿದ್ದವು. ಶನಿವಾರ-ಭಾನುವಾರ 500ಕ್ಕೂ ಅಧಿಕ ವಾಹನಗಳು ತಲಕಾವೇರಿಯತ್ತ ತೆರಳುತ್ತಿದ್ದವು.ಇದೀಗ ಕೋವಿಡ್‌–19 ಭೀತಿಯಿಂದಾಗಿ ವಾಹನಗಳ ಸಂಖ್ಯೆ ಗಣನೀಯವಾಗಿ ಇಳಿಮುಖಗೊಂಡಿದೆ.

ಗ್ರಾಮಪಂಚಾಯಿತಿಗೆ ಪಾರ್ಕಿಂಗ್ ಶುಲ್ಕ ಲಭಿಸದೇ ಆದಾಯಕ್ಕೆ ಹೊಡೆತ ಬಿದ್ದಿದೆ. ಭಕ್ತರ ಕೊರತೆಯಿದ್ದರೂ ದೇವಾಲಯಗಳಲ್ಲಿ ಪೂಜಾಕಾರ್ಯಗಳು ಎಂದಿನಂತೆ ನೆರವೇರಿದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು