ಭಾನುವಾರ, ಮೇ 9, 2021
25 °C

ವರ್ಗಾವಣೆ: ಚಾಲನಾ ಆದೇಶಕ್ಕೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕಳೆದ ವಾರವೇ ಕೊನೆಗೊಂಡಿದ್ದು, ಎಲ್ಲ ಶಿಕ್ಷಕರಿಗೆ ಸೋಮವಾರದೊಳಗೆ (ನ.11) ಚಾಲನಾ ಆದೇಶವನ್ನು ಕಡ್ಡಾಯವಾಗಿ ನೀಡಬೇಕು ಎಂದು ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ.

ಬಹುತೇಕ ಮಂದಿಗೆ ಚಾಲನಾ ಆದೇಶ ನೀಡಲಾಗಿದ್ದು, ತಾಂತ್ರಿಕ ಕಾರಣಗಳಿಂದಾಗಿ ಕೆಲವರಿಗೆ ಬಾಕಿ ಉಳಿದಿದೆ. ಅದನ್ನೂ ಸಹ ತಕ್ಷಣ ನೀಡುವ ನಿಟ್ಟಿನಲ್ಲಿ ಬಿಇಒ ಮತ್ತು ಡಿಡಿಪಿಐಗಳಿಗೆ ಈ ಆದೇಶ ನೀಡಲಾಗಿದೆ.

ವರ್ಗಾವಣೆಗೊಂಡ ಹುದ್ದೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಎಲ್ಲ ಶಿಕ್ಷಕರ ಅಂತಿಮ ವೇತನ ಪಟ್ಟಿ (ಎಲ್‌ಪಿಸಿ) ಮತ್ತು ಸೇವಾವಹಿಯನ್ನು (ಸರ್ವಿಸ್‌ ರಿಜಿಸ್ಟರ್‌) ಇದೇ 16ರೊಳಗೆ ಸಂಬಂಧಪಟ್ಟ ಕಚೇರಿಗಳಿಗೆ ಕಳುಹಿಸಲು ಸಹ ತಾಕೀತು ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು