ಶಿಕ್ಷಕರ ವರ್ಗಾವಣೆ ಮಸೂದೆ ಭ್ರಷ್ಟಾಚಾರಕ್ಕೆ ದಾರಿ:ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್

7

ಶಿಕ್ಷಕರ ವರ್ಗಾವಣೆ ಮಸೂದೆ ಭ್ರಷ್ಟಾಚಾರಕ್ಕೆ ದಾರಿ:ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್

Published:
Updated:

ಬೆಂಗಳೂರು: ಶಿಕ್ಷಕರ ವರ್ಗಾವಣೆ ಸಂಬಂಧಿಸಿದ ಮಸೂದೆ ವ್ಯಾಪಕ ಭ್ರಷ್ಟಾಚಾರಕ್ಕೆ ದಾರಿ ಮಾಡುತ್ತದೆ ಎಂದು ಕೆಲವು ಕಾಂಗ್ರೆಸ್ ಸದಸ್ಯರು ವಿಧಾನಪರಿಷತ್ ನಲ್ಲಿ ವಿರೋಧಿಸಿದರು.

ಮಸೂದೆಯನ್ನು ಸೆಲೆಕ್ಟ್ ಸಮಿತಿಗೆ ಒಪ್ಪಿಸಬೇಕು. ಈಗಿನ ರೂಪದಲ್ಲಿರುವ ಮಸೂದೆ ಕೆಟ್ಟದ್ದಾಗಿದೆ ಇದನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಎಸ್.ಆರ್. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಸೆಲೆಕ್ಟ್ ಸಮಿತಿಗೆ ಒಪ್ಪಲು ಸಾಧ್ಯವಿಲ್ಲ ಎಂದು ಸಭಾನಾಯಕಿ ಜಯಮಾಲ ಹೇಳಿದರು. ಕಲಾಪವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದ ಕಾರಣ ಸಭಾಪತಿ ಕಲಾಪ ಅರ್ಧ ಗಂಟೆ ಕಾಲ ಮುಂದೂಡಿದರು.

ಪುಟ್ಟಣ್ಣ ಮಾತನಾಡಿ, ಮಸೂದೆಯು ಭ್ರಷ್ಟಾಚಾರಕ್ಕೆ ದಿಡ್ಡಿ ಬಾಗಿಲು ಅವಕಾಶ ಮಾಡಿದಂತಾಗುತ್ತದೆ. ವರ್ಗಾವಣೆ ದಂಧೆಯ ಏಜೆಂಟರು ಹುಟ್ಟಿಕೊಳ್ಳುತ್ತಾರೆ. ಅತ್ಯಂತ ಮಾರಕ ಮಸೂದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !