ಮುಗಿಯದ ಶಿಕ್ಷಕರ ವರ್ಗಾವಣೆ ಗೊಂದಲ

ಗುರುವಾರ , ಜೂಲೈ 18, 2019
22 °C
ಪದವೀಧರ ಶಿಕ್ಷಕರ ನೇಮಕ ನಿಯಮ ವಿರೋಧಿಸಿ ಪಾಠ ಬಂದ್‌

ಮುಗಿಯದ ಶಿಕ್ಷಕರ ವರ್ಗಾವಣೆ ಗೊಂದಲ

Published:
Updated:

ಬೆಂಗಳೂರು: ಒಂದೆಡೆ ಮುಗಿಯದ ಶಿಕ್ಷಕರ ವರ್ಗಾವಣೆ ಗೊಂದಲ, ಮತ್ತೊಂದೆಡೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಪ್ರಾಥಮಿಕ ಶಾಲೆಗಳನ್ನು ಗೊಂದಲದ ಗೂಡಾಗಿ ಮಾಡಿದ್ದು, ಮಕ್ಕಳು ಗಲಿಬಿಲಿ
ಗೊಂಡಿದ್ದಾರೆ.

ಜೂನ್‌ ತಿಂಗಳ ಮೊದಲೇ ಮುಗಿಯಬೇಕಾದ ವರ್ಗಾವಣೆ ಪ್ರಕ್ರಿಯೆ ಇನ್ನೂ ಕೊನೆಗೊಂಡಿಲ್ಲ. ಹೀಗಾಗಿ ಬಹುತೇಕ ಶಾಲೆಗಳಲ್ಲಿ ಪಾಠ ಮರೀಚಿಕೆಯಾಗಿದೆ. ಪದವೀಧರ ಶಿಕ್ಷಕರ ನೇಮಕ ನಿಯಮವನ್ನು ವಿರೋಧಿಸಿರುವ ಪ್ರಾಥಮಿಕ ಶಾಲೆಗಳ ಶಿಕ್ಷಕರು 6ರಿಂದ 8ರ ತನಕದ ತರಗತಿಗಳಿಗೆ ಪಾಠ ಮಾಡುವುದನ್ನು ಸೋಮವಾರದಿಂದ ಹಲವೆಡೆ ನಿಲ್ಲಿಸಿಬಿಟ್ಟಿದ್ದಾರೆ. ಪರಿಣಾಮವಾಗಿ ಶಾಲೆಗಳಲ್ಲಿ ಪಾಠವೇ ನಡೆಯುತ್ತಿಲ್ಲ. 

ಮಂಗಳವಾರ ‘ಪ್ರಜಾವಾಣಿ’ಗೆ ಕರೆ ಮಾಡಿದ ರಾಜ್ಯದ ವಿವಿಧ ಭಾಗದ ಹತ್ತಾರು ಮಂದಿ ಶಿಕ್ಷಕರು ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಸೆಪ್ಟೆಂಬರ್‌ನಲ್ಲಿ ಮೊದಲ ಸೆಮಿಸ್ಟರ್‌ ಪರೀಕ್ಷೆ ನಡೆಯಬೇಕಿದ್ದು, ಹೆಚ್ಚಿನ ಕಡೆಗಳಲ್ಲಿ ಪಾಠಗಳು ಸರಿಯಾಗಿ ಆರಂಭವಾಗಿಯೇ ಇಲ್ಲ ಎಂಬುದನ್ನು ಬೊಟ್ಟುಮಾಡಿ ತೋರಿಸಿದರು. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಒತ್ತಾಯವಾಗಿತ್ತು.

ಈ ಮಧ್ಯೆ, ಪ್ರಾಥಮಿಕ ಶಾಲೆಗಳಲ್ಲಿ ಪದವೀಧರ ಶಿಕ್ಷಕರ ನೇಮಕಾತಿ ಸಮಸ್ಯೆಯನ್ನು ಬಗೆಹರಿಸದಿದ್ದರೆ ಇದೇ 9ರಿಂದ ಶಾಲೆ ಬಂದ್‌ ಮಾಡಿ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಎಚ್ಚರಿಕೆ ನೀಡಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !