ಸೋಮವಾರ, ಜೂಲೈ 6, 2020
27 °C

ಹಿರಿಯ ಸಾಹಿತಿ ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ಗಣ್ಯರ ಸಂತಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಪಾಟೀಲ ಪುಟ್ಟಪ್ಪ ಅವರದ್ದು ಚೇತೋಹಾರಿ ವ್ಯಕ್ತಿತ್ವವಾಗಿತ್ತು. ವೈಯಕ್ತಿಕ ಬದುಕಿಗಿಂತ ಅವರು ನಾಡು, ನುಡಿಗೆ ಬದುಕನ್ನು ಮೀಸಲಿಟ್ಟಿದ್ದರು ಎಂದು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಪಾಟೀಲ ಪುಟ್ಟಪ್ಪ ಅವರ ಪ್ರಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಅವರು, 'ಪಾಪು ಕನ್ನಡ ನಾಡಿನ ಆಸ್ತಿ. ಅವರ ಕನ್ನಡದ ಸೇವೆ ಪರಿಗಣಿಸಿ ನಾಡೋಜ ಪ್ರಶಸ್ತಿ ನೀಡಲಾಗಿದೆ. ಸರಳತನದಿಂದ ಬಾಳಿ, ಬದುಕಿದ ಅವರು ನಾಡಿಗೆ ಉತ್ತಮ ಮೌಲ್ಯ ತೋರಿಸಿದ್ದರು. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ' ಎಂದು ಸಂತಾಪ ವ್ಯಕ್ತಪಡಿಸಿದರು.

'ನಾಡಿನ ಇತಿಹಾಸ ಹಾಗೂ ಹೋರಾಟದ ಪ್ರತಿಯೊಂದು ಕ್ಷಣದಲ್ಲೂ  ಗಮನಿಸಿದರೆ, ಹೋರಾಟದ ಪ್ರತಿಯೊಂದು ಕ್ಷಣದಲ್ಲಿ ಪಾಪು ಕಾಣುತ್ತಿದ್ದಾರೆ. ಉತ್ತರ ಕರ್ನಾಟಕದ ಗಟ್ಟಿ ಧ್ವನಿಯಾಗಿದ್ದರು. ಅಂತಹ ಮಹಾನ್ ವ್ಯಕ್ತಿ ಕಳೆದುಕೊಂಡು ಬಡವರಾಗಿದ್ದೇವೆ' ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು.

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, 'ಕನ್ನಡಕ್ಕಾಗಿ ಹುಟ್ಟಿದವರು. ಕನ್ನಡಕ್ಕಾಗಿಯೇ ಬದುಕಿದವರು. ಕೊನೆವರೆಗೂ ಕನ್ನಡಕ್ಕಾಗಿಯೇ ಹೋರಾಡಿದ ಮಹಾನ್ ವ್ಯಕ್ತಿ ಪಾಟೀಲ ಪುಟ್ಟಪ್ಪ' ಎಂದು  ಹೇಳಿದರು.

ಪುಟ್ಟಪ್ಪ ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ. ಕನ್ನಡ ನಾಡಿಗಾಗಿ ಅವರು ಸಲ್ಲಿಸಿದ ಸೇವೆ ದೀರ್ಘಕಾಲದ್ದು. ಅವರ ಸ್ಥಾನ ಯಾರಿಂದಲೂ ತುಂಬಲು ಸಾಧ್ಯವಿಲ್ಲವೆಂದು ಬಿಜೆಪಿ ಮುಖಂಡ ಚಂದ್ರಕಾಂತ ಬೆಲ್ಲದ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು