ಸೋಮವಾರ, ಆಗಸ್ಟ್ 19, 2019
24 °C

ಬಿಜೆಪಿಯವರಿಂದ ಟಿಪ್ಪು ಜಯಂತಿ ಬೇಕಿರಲೂ ಇಲ್ಲ: ತನ್ವೀರ್‌ ಸೇಠ್‌

Published:
Updated:

ಮೈಸೂರು: ‘ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಿ ಎಂದು ನಾವು ಯಾವುದೇ ಸರ್ಕಾರವನ್ನೂ ಕೇಳಿರಲಿಲ್ಲ. ಯಡಿಯೂರಪ್ಪ ನೇತೃತ್ವದ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿದ್ದರಿಂದ ಬೇಸರವಿಲ್ಲ. ಬಿಜೆಪಿಯವರಿಂದ ಜಯಂತಿ ಆಚರಣೆ ಬೇಕಿರಲೂ ಇಲ್ಲ’ ಎಂದು ಶಾಸಕ ತನ್ವೀರ್‌ ಸೇಠ್‌ ಇಲ್ಲಿ ಗುರುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಲಿದೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ, ಇದೇ ವಿಷಯ ಸರ್ಕಾರದ ಆದ್ಯತೆ ಎಂಬುದು ನಮಗೆ ಗೊತ್ತಿರಲಿಲ್ಲ. ಟಿಪ್ಪು ಹೆಸರನ್ನು ರಾಜಕೀಯ ಉದ್ದೇಶಕ್ಕೆ ಬಳಸುತ್ತಿರುವುದು ದೊಡ್ಡ ದುರಂತ’ ಎಂದರು.

 

Post Comments (+)