ಗುರುವಾರ , ಜೂನ್ 4, 2020
27 °C

ಹಳಿ ತಪ್ಪಿದ ಎಂಜಿನ್‌, ತಪ್ಪಿದ ಅನಾಹುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೇರಳದ ತಿರೂರಿನಿಂದ ಜೈಪುರಕ್ಕೆ ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಶ್ರಮಿಕ್‌ ರೈಲಿನ ಎಂಜಿನ್‌ ನಗರದ ಹೊರವಲಯದ ಪಡೀಲ್‌ ಬಳಿ ಹಳಿ ತಪ್ಪಿದ್ದು, ಯಾರಿಗೂ ಅಪಾಯವಾಗಿಲ್ಲ.

ರೈಲು ಎಂಜಿನ್ ಸೋಮವಾರ ಮಧ್ಯರಾತ್ರಿ 1.35ರ ಸುಮಾರಿಗೆ ಹಳಿ ತಪ್ಪಿದೆ. ಬೋಗಿಗಳು ಸುರಕ್ಷಿತವಾಗಿದ್ದು, ಯಾವುದೇ ತೊಂದರೆಯಾಗಿಲ್ಲ. ಬದಲಿ ಎಂಜಿನ್ ವ್ಯವಸ್ಥೆ ಮಾಡಿ ಮುಂಜಾನೆ 4 ಗಂಟೆಗೆ ರೈಲನ್ನು ಮಂಗಳೂರು ಜಂಕ್ಷನ್‌ ನಿಲ್ದಾಣಕ್ಕೆ ಕರೆತರಲಾಯಿತು. ಹೊಸ ಎಂಜಿನ್‌ ಅಳವಡಿಸಿ, ಬೆಳಿಗ್ಗೆ 6 ಗಂಟೆಗೆ ಜೈಪುರಕ್ಕೆ ಕಳುಹಿಸಲಾಯಿತು ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು