ಬೆಂಗಳೂರು ಪೊಲೀಸ್ ‌ಕಮಿಷನರ್ ಆಗಿ ಅಲೋಕ್ ಕುಮಾರ್, ರವಿ ಚನ್ನಣ್ಣನವರ ಸಿಐಡಿಗೆ

ಬುಧವಾರ, ಜೂಲೈ 17, 2019
29 °C
ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

ಬೆಂಗಳೂರು ಪೊಲೀಸ್ ‌ಕಮಿಷನರ್ ಆಗಿ ಅಲೋಕ್ ಕುಮಾರ್, ರವಿ ಚನ್ನಣ್ಣನವರ ಸಿಐಡಿಗೆ

Published:
Updated:

ಬೆಂಗಳೂರು: ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನಗರ ಪೊಲೀಸ್ ಆಯುಕ್ತರಾಗಿ ಬಡ್ತಿ ಪಡೆದಿದ್ದು ರೌಡಿಗಳಿಗೆ ಮತ್ತಷ್ಟು ನಡುಕ ಉಂಟಾಗಿದೆ. 

ನಗರದ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರನ್ನು ನಗರ ಕಮಿಷನರ್ ಹುದ್ದೆಗೆ ನೇಮಕ ಮಾಡಲಾಗಿದೆ. ಆ ಸ್ಥಾನದಲ್ಲಿದ್ದ ಟಿ. ಸುನೀಲ್ ಕುಮಾರ್ ಅವರನ್ನು ಪೊಲೀಸ್ ನೇಮಕಾತಿ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇದರೊಂದಿಗೆ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರಿ ಸರ್ಜರಿ‌ ಮಾಡಿದ್ದು, ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಭಾನುವಾರ ರಾತ್ರಿ ಆದೇಶ ಹೊರಡಿಸಿದೆ. ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಆಗಿದ್ದ ರವಿ ಚನ್ನಣ್ಣನವರ ಅವರನ್ನು ಸಿಐಡಿ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಬಿ.ರಮೇಶ್ ಅವರನ್ನು ವರ್ಗಾಯಿಸಲಾಗಿದೆ.
ವರ್ಗಾವಣೆಗೊಂಡರು: * ಟಿ.ಸುನೀಲ್ ಕುಮಾರ್ - ಎಡಿಜಿಪಿ, ಪೊಲೀಸ್ ನೇಮಕಾತಿ ವಿಭಾಗ
* ಅಲೋಕ್ ಕುಮಾರ್- ಬೆಂಗಳೂರು ನಗರ ಪೊಲೀಸ್ ಕಮಿಷನರ್
* ಅಮೃತ್ ಪಾಲ್ - ಐಜಿಪಿ, ದಾವಣಗೆರೆ
* ಉಮೇಶ್ ‌ಕುಮಾರ್ - ಬೆಂಗಳೂರು ಹೆಚ್ಚುವರಿ ಪೊಲೀಸ್ ಕಮಿಷನರ್
* ಬಿ.ಕೆ.ಸಿಂಗ್- ಕಾರ್ಯದರ್ಶಿ, ಗೃಹ ಇಲಾಖೆ
* ಸುಮೇಂದು ಮುಖರ್ಜಿ - ಐಜಿಪಿ, ಆಂತರಿಕ ಭದ್ರತಾ ವಿಭಾಗ
* ರಾಘವೇಂದ್ರ ಸುಹಾಸ್ - ಐಜಿಪಿ, ಮೈಸೂರು
* ಬಿ.ಆರ್.ರವಿಕಾಂತೇಗೌಡ - ಬೆಂಗಳೂರು ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ)
* ಅಮಿತ್ ಸಿಂಗ್ - ಕಮಾಂಡೇಟ್, ಗೃಹ ರಕ್ಷಕ ದಳ
* ರಾಮ್ ನಿವಾಸ್ ಸೆಪೆಟ್ - ಎಸ್ಪಿ, ಎಸಿಬಿ
* ಎಂ.ಎನ್.ಅನುಚೇತ್ - ಎಸ್ಪಿ, ಬೆಂಗಳೂರು ರೈಲ್ವೆ
* ಬಿ.ರಮೇಶ್ - ಡಿಸಿಪಿ, ಬೆಂಗಳೂರು ಪಶ್ಚಿಮ ವಿಭಾಗ
* ರವಿ ಚನ್ನಣ್ಣನವರ - ಎಸ್ಪಿ, ಸಿಐಡಿ
* ಭೀಮಾಶಂಕರ ಗುಳೇದ್ - ಡಿಸಿಪಿ, ಬೆಂಗಳೂರು ಈಶಾನ್ಯ ವಿಭಾಗ
* ಸಿ.ಬಿ.ರಿಷ್ಯಂತ್ - ಎಸ್ಪಿ, ಮೈಸೂರು ಜಿಲ್ಲೆ
* ಎಂ.ಎಸ್.ಮೊಹಮ್ಮದ್ ಸುಚೇತ್ - ಎಸ್ಪಿ, ಕೆಜಿಎಫ್
* ಟಿ.ಪಿ. ಶಿವಕುಮಾರ್ - ಎಸ್ಪಿ, ಬೆಂಗಳೂರು ಗ್ರಾಮಾಂತರ
* ಎನ್. ವಿಷ್ಣುವರ್ಧನ್ - ಡಿಸಿಪಿ (ಆಡಳಿತ), ಬೆಂಗಳೂರು ಕಮಿಷನರೇಟ್
* ಕಲಾ‌ ಕೃಷ್ಣಸ್ವಾಮಿ - ನಿರ್ದೇಶಕಿ, ವಿಧಿ ವಿಜ್ಞಾನ ಪ್ರಯೋಗಾಲಯ

ಬರಹ ಇಷ್ಟವಾಯಿತೆ?

 • 26

  Happy
 • 4

  Amused
 • 1

  Sad
 • 2

  Frustrated
 • 5

  Angry

Comments:

0 comments

Write the first review for this !