ಭಾನುವಾರ, ಜನವರಿ 26, 2020
27 °C

ದ್ರುವರಾಜ್ ದೇಸಾಯಿ, ಮಹಾದೇವಪ್ಪಗೆ ಟೀಯೆಸ್ಸಾರ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2017ನೇ ಸಾಲಿನ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಗೆ ಹಿರಿಯ ಪತ್ರಕರ್ತ ದ್ರುವರಾಜ್ ವೆಂಕಟರಾವ್ ಮುತಾಲಿಕ್ ದೇಸಾಯಿ, 2018ನೇ ಸಾಲಿನ ಇದೇ ಪ್ರಶಸ್ತಿಗೆ ಮೈಸೂರಿನ ಡಿ.ಮಹಾದೇವಪ್ಪ ಆಯ್ಕೆಯಾಗಿದ್ದಾರೆ.

ಕನ್ನಡ ದಿನಪತ್ರಿಕೆ ಹುಟ್ಟುಹಾಕಿ ಬೆಳೆಸಿದವರಿಗೆ ನೀಡುವ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ತುಮಕೂರಿನ ಎಸ್.ನಾಗಣ್ಣ (2017), ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯು.ಪಿ.ಶಿವಾನಂದ (2018) ಭಾಜನರಾಗಿದ್ದಾರೆ.

ತಲಾ ₹2 ಲಕ್ಷ ನಗದು, ಸ್ಮರಣಿಕೆಯನ್ನು ಈ ಪ್ರಶಸ್ತಿ ಒಳಗೊಂಡಿದೆ. ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಇವರನ್ನು ಆಯ್ಕೆಮಾಡಿದೆ.2016ನೇ ಸಾಲಿನ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಗಂಗಾಧರ ಹಿರೇಗುತ್ತಿ ಅವರಿಗೂ ತಲಾ ₹2 ಲಕ್ಷ ನಗದು ಒಳಗೊಂಡ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರದಾನ ಮಾಡುವರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು