ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರಿ ಉದ್ಯೋಗಕ್ಕೆ ಅನ್ವಯವಿಲ್ಲ

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶೇ 10ರಷ್ಟು ಮೀಸಲಾತಿ ಸೌಲಭ್ಯ
Last Updated 17 ಮೇ 2019, 18:35 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶೇ 10ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ, ರಾಜ್ಯ ಸರ್ಕಾರದ ಉದ್ಯೋಗಕ್ಕೆ ಇದು ಅನ್ವಯಿಸುವುದಿಲ್ಲ.

ಕೇಂದ್ರ ಸರ್ಕಾರದ ನಾಗರಿಕ ಸೇವೆ, ಹುದ್ದೆಗಳ ನೇಮಕಾತಿ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರವೇಶದ ಸಂದರ್ಭಗಳಲ್ಲಿ ಮೀಸಲಾತಿ ಪಡೆಯಬಹುದಾಗಿದೆ. ಅದಕ್ಕಾಗಿ ‘ಆದಾಯ ಮತ್ತು ಸ್ವತ್ತು ಪ್ರಮಾಣ ಪತ್ರ’ ನೀಡಲು ಆದೇಶಿಸಲಾಗಿದೆ. ಆದರೆ ಈ ಪ್ರಮಾಣ ಪತ್ರವನ್ನು ರಾಜ್ಯ ಸರ್ಕಾರದ ಉದ್ಯೋಗ ನೇಮಕಾತಿಯಲ್ಲಿ ಪರಿಗಣಿಸುವುದಿಲ್ಲ.

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶೇ 10ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿತ್ತು. ಮೀಸಲಾತಿ ಸೌಲಭ್ಯ ಪಡೆಯಲು ರಾಜ್ಯದಲ್ಲಿ ಪ್ರಮಾಣ ಪತ್ರ ನೀಡುವ ಸಲುವಾಗಿ ಈಗ ಆದೇಶ ಹೊರಡಿಸಲಾಗಿದೆ.ಉದ್ಯೋಗ ಮೀಸಲಾತಿಗೆ ಪ್ರತ್ಯೇಕ ಆದೇಶ ಹೊರಡಿಸಬೇಕಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.

ಪರಿಶಿಷ್ಟ ಜಾತಿ, ವರ್ಗಗಳು ಹಾಗೂ ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇಲ್ಲದ 144 ಜಾತಿ ಹಾಗೂ ಧರ್ಮದ ಆರ್ಥಿಕವಾಗಿ ಹಿಂದುಳಿದವರು ಮೀಸಲಾತಿ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ.

***

ಆಗಮುಡಿ, ಮುಟ್ರಚಾ, ಬಾವಂಧಿ, ಬೈರಾಗಿ, ದವರಿ, ಗೋಸಾಯಿ, ಹೆಳವ, ನಂದಿವಾಲ, ಮೊಗೇರ, ಬುಂಡೆ–ಬೆಸ್ತರು, ಕಬ್ಬೇರ/ಕಬ್ಬೇರ್, ಖಾರ್ವಿ/ಕೊಂಕಣ ಖಾರ್ವಿ, ಕಿಳ್ಳೇಕ್ಯಾತ, ದೇವದಾಸಿ, ಬಸವಿ, ಬೋಗಮ್, ಗಣಿಕ, ಕಲಾವಂತ್, ಗಾಣಿಗ ಮನೆ, ಗೂರ್ಖಾ, ಲಾಡರು/ ಲಾಡರ/ ಲಾಡರ್, ಯೆಲೆಗಾಳ್, ಮಲಯ, ಗೂರಿಗ, ಪಂಗ್ಯೂಲ್, ಪಂಗೂಸಲ್, ಜೀನಾಗರ, ತಿವಾರ್, ಕಲರಿ, ಕಲ್ಲರ್, ಕಲ್ಲುಕುಟಿಗ ಉಪ್ಪಾರ, ಪಡಿ, ದೇರಿಯಾ, ಸರಂತ, ಗೌಳಿ, ತೆಲುಗು ಗೌಡ (ಚಿಕ್ಕಮಗಳೂರು– ಹಾಸನ ಜಿಲ್ಲೆ), ಬಂಜಾರಿ, ಬ್ರಿಂಜಾರಿ, ವಂಜಾರ, ವಂಜಾರಿ, ಲ್ಯಾಂಬೈಡ್, ಗೋರೆ/ಗೋರಿಯಾ, ರೆಮೋಶಿ, ಪರದೇಸಿ, ಕಾಡುಗೊಲ್ಲ, ಹಟ್ಟಿಗೊಲ್ಲ.

ಮಡಿವಾಳ, ಸಕಜವದು, ಹಾಲ ಕ್ಷತ್ರಿಯ, ಇಲ್ಲವಾನ್, ಥಿಯಾನ್/ ಥಿಯ್ಯಾ, ಕುಂಬಾರ, ಕ್ಷೌರಿಕ, ನಾಡಿಗ್, ಬುದ್ಧಿಸ್ಟ್, ಅಗ್ನಿವಂಶ ಕ್ಷತ್ರಿಯ, ಅಗ್ನಿಕುಲ ಕ್ಷತ್ರಿಯ, ಗಜ್ಜಿಗರ, ತರುವನ್, ಘಾಡ್ಸಿ, ಬೋಗರ್, ಕೊಲಾಯಿರಿ, ಕೊಲ್ಯಿರಿ, ಕುಟುಮ, ಕುಳವಾಡಿ ಮರಾಠಿ, ಪೊಲೇದೇವ/ಪೋಲೇದೇವರು, ಮಿರಲ್, ಸ್ವಾಕುಲಸಾಲಿ/ ಸ್ವಾಕುಲಸಾಲೆ, ಜ್ಯೋತಿನಗರ್/ಜ್ಯೋತಿನಗರ ವೈಶ್ಯ, ಅನಪ್ಪನ್, ಬಂಧಿ, ಬೋಲಹಲ್ಲಾಳ, ಬಲ್ಲಾಳ, ಭಾಟಿಯಾಳ್, ಭಾಟಿಯಾ, ಚಕ್ಕನ್, ಡೋಗ್ರ, ಗುಲ್ಲಿ, ಜೆಟ್ಟಿ/ಜಟ್ಟಿ, ಮಲ್ಲರು ಮಲ್ಲ ಕ್ಷತ್ರಿಯ, ಮುಷ್ಠಿಗ, ಕನಕನ್, ಕನಕರ್, ಕರುಣಿಕ, ಕೊಟ್ಟೆಯಾರ,ಕುಮಾರ ಕ್ಷತ್ರಿಯ, ಸರುಗರ (ಉತ್ತರ ಕನ್ನಡ), ಸೇರ್ವೇಗಾರ್(ದಕ್ಷಿಣ ಕನ್ನಡ), ಕ್ಷತ್ರಿಯ/ಕ್ಷತ್ರಿ, ಮಲವ, ಮಲೆಯ,ಆರ್ಯನ್.

ರಾಜು ಕ್ಷತ್ರಿಯ, ರಾಜು–ರಾಜು, ರಾಜುವರ್/ರಾಜವರ್/ ರಾಚೇವರ್, ಸೋಮವಂಶ ಕ್ಷತ್ರಿಯ, ಸ್ಥಾನಿಕ, ತುಳು, ತುಳುವ, ಉಸ್ತಮಾ (ಧಾರವಾಡ, ಬೆಳಗಾವಿ, ಗದಗ ಜಿಲ್ಲೆ), ರೆಡ್ಡಿ(ಬಲಿಜ), ತುಲೇರು (ಬಲಿಜ), ಅರಸು, ಮುಸ್ಲಿಂ (ನವಾಯತ್, ಬೋರಾ, ಸಯ್ಯಿದ್, ಪಠಾಣ್, ಮೊಗಲ್, ಕೊಂಕಣಿ), ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ಗಂಗಟಕಾರ್ ಒಕ್ಕಲಿಗ, ದಾಸ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮ, ರೆಡ್ಡಿ, ನಾಮಧಾರಿಗೌಡ, ಕೊಡಗರು, ರೆಡ್ಡಿ (ಬಲಿಜ), ತುಲೇರು (ಬಲಿಜ), ವೀರಶೈವ ಲಿಂಗಾಯತ, ಲಿಂಗಾಯತ ಹೆಳವ, ಲಿಂಗಾಯತ ಅಂಬಿಗ, ಲಿಂಗಾಯತಭೋಯಿ, ಲಿಂಗಾಯತ ಗಂಗಾಮತ, ಲಿಂಗಾಯತ್ ಬಂಡಾರಿ, ಲಿಂಗಾಯತ ಕ್ಷತ್ರಿಯ, ಲಿಂಗಾಯತ ನವಲಿಗ ನವಿ,ಲಿಂಗಾಯತ ಪಾಂಚಾಲ, ಲಿಂಗಾಯತ/ವೀರಶೈವ–ಪಂಚಮಸಾಲಿ.

ಮರಾಠ, ಅರೆಕ್ಷತ್ರಿ/ ಅರೆ ಮರಾಠ/ ಆರ್ಯ ಮರಾಠ, ಆರ್ಯ/ ಆರ್ಯರು, ಕೊಂಕಣ್ ಮರಾಠ, ಕ್ಷತ್ರಿಯ ಮರಾಠ, ಕ್ರಿಶ್ಚಿನ್, ಬಂಟ್, ಪರಿವಾರ ಬಂಟ್, ಜೈನ (ದಿಗಂಬರ), ಬ್ರಾಹ್ಮಣ, ಆರ್ಯವೈಶ್ಯ, ಜೈನ, ನಾಯರ್, ಮೊದಲಿಯಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT