ಶುಕ್ರವಾರ, ನವೆಂಬರ್ 22, 2019
27 °C
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ

‘ಕುಲಪತಿ ಎದುರಾದರೆ ತಲೆ ತಗ್ಗಿಸುವ ಸ್ಥಿತಿ ಇದೆ’

Published:
Updated:

ಬೆಂಗಳೂರು: ‘ಕುಲಪತಿ ನೇಮಕಾತಿಯಲ್ಲಿ ಕೇಳಿ ಬರುತ್ತಿರುವ ಅಕ್ರಮ, ಭ್ರಷ್ಟಾಚಾರದಿಂದಾಗಿ ಈ ಹುದ್ದೆಯ ಗೌರವ ಕಡಿಮೆಯಾಗಿದ್ದು, ಕುಲಪತಿಗಳು ಎದುರು ಬಂದರೆ ತಲೆ ತಗ್ಗಿಸಿ ನಿಲ್ಲುವ ಪರಿಸ್ಥಿತಿ ಇದೆ’ ಎಂದು  ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.

ವಿವಿಧ ವಿ.ವಿ.ಗಳ ಕುಲಪತಿಗಳು ಮತ್ತು ಕುಲಸಚಿವರಿಗೆ ರೇಟಿಂಗ್ ಪ್ರಮಾಣಪತ್ರ ನೀಡಿ ಮಾತನಾಡಿದ ಅವರು, ‘ವಿಶ್ವವಿದ್ಯಾಲಯಗಳ ಕುಲಪತಿ ಎಂದರೆ ಅಪಾರ ಗೌರವದ ಹುದ್ದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆ ಗೌರವವನ್ನೇ ಕಳೆದುಕೊಂಡಿದೆ. ಈ ಪರಿಸ್ಥಿತಿ ಬದಲಾವಣೆಗೆ ‍ಪಾರದರ್ಶಕ ವ್ಯವಸ್ಥೆ ತರುವುದು ನಿಶ್ಚಿತ ಎಂದರು.

ಪ್ರತಿಕ್ರಿಯಿಸಿ (+)