ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಪಾನ ನಿಷೇಧ; ಜನತಾ ಚಳವಳಿ ಆಗಬೇಕು: ವೀರೇಂದ್ರ ಹೆಗ್ಗಡೆ

Last Updated 3 ಮೇ 2020, 18:37 IST
ಅಕ್ಷರ ಗಾತ್ರ

ಉಜಿರೆ: ‘ಎಲ್ಲರೂ ಮದ್ಯ ವ್ಯಸನದಿಂದ ಮುಕ್ತರಾದಾಗ ಆರೋಗ್ಯ ಭಾಗ್ಯದ ಜೊತೆಗೆ, ಶಾಂತಿ, ನೆಮ್ಮದಿಯೊಂದಿಗೆ ಕೌಟುಂಬಿಕ ಜೀವನ ನಡೆಸಬಹುದು. ರಾಷ್ಟ್ರ ಮಟ್ಟದಲ್ಲಿ ಸರ್ಕಾರ ಮದ್ಯಪಾನ ನಿಷೇಧಿಸಬೇಕು‘ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಲಹೆ ನೀಡಿದ್ದಾರೆ.

‘ಲಾಕ್‌ಡೌನ್ ಪರಿಣಾಮ 40 ದಿನಗಳಿಂದ ಮದ್ಯ ಸೇವನೆ ತ್ಯಜಿಸಿದ್ದ ಎಲ್ಲರೂ ಶಾಶ್ವತವಾಗಿ ಮದ್ಯ ತ್ಯಜಿಸಬೇಕು. ಸಾರ್ಥಕ ಜೀವನ ನಡೆಸಬೇಕು. ಇದರಿಂದ ಉಳಿತಾಯವೂ ಹೆಚ್ಚುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಎಲ್ಲಾ ಮಹಿಳೆಯರು ಮದ್ಯಪಾನ ನಿಷೇಧ ಜನತಾ ಚಳವಳಿಯಾಗಿ ರೂಪಿಸಬೇಕು. ಮದ್ಯ ಖರೀದಿಯನ್ನು ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT