ಅಶ್ಲೀಲ ಆಡಿಯೋ ನನ್ನದಲ್ಲ, ಎದುರಾಳಿಗಳ ಷಡ್ಯಂತ್ರ: ಎಚ್‌. ವಿಶ್ವನಾಥ್‌ 

ಶುಕ್ರವಾರ, ಜೂಲೈ 19, 2019
22 °C

ಅಶ್ಲೀಲ ಆಡಿಯೋ ನನ್ನದಲ್ಲ, ಎದುರಾಳಿಗಳ ಷಡ್ಯಂತ್ರ: ಎಚ್‌. ವಿಶ್ವನಾಥ್‌ 

Published:
Updated:

ಮುಂಬೈ: ‘ನನ್ನದು ಎನ್ನಲಾದ ಅಶ್ಲೀಲ ಆಡಿಯೊ ಬಿಡುಗಡೆ ಮಾಡುವ ಮೂಲಕ ರಾಜಕೀಯವಾಗಿ ಷಡ್ಯಂತ್ರ ನಡೆಸಲಾಗುತ್ತಿದೆ. ಇದರಲ್ಲಿ ಹುರುಳಿಲ್ಲ,’ ಎಂದು ಶಾಸಕ ಎಚ್‌. ವಿಶ್ವನಾಥ್‌ ಅವರು ಸ್ಪಷ್ಟಪಡಿಸಿದ್ದಾರೆ. 

ವಿಶ್ವನಾಥ್‌ ಮತ್ತು ಮಹಿಳೆಯೊಬ್ಬರ ನಡುವಿನ ಆಶ್ಲೀಲ ಮಾತುಗಳು ಎನ್ನಲಾದ ಆಡಿಯೊವೊಂದು ಮಂಗಳವಾರ ಬೆಳಗ್ಗೆ ಸಾಮಾಜಿಕ ತಾಣಗಳಲ್ಲಿ ಹರಿದಾಡಿತು. ಇದೇ ಹಿನ್ನೆಲೆಯಲ್ಲಿ ಇಂದು ಮುಂಬೈ ಮೂಲಕ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ವಿಶ್ವನಾಥ್‌, ಇದೆಲ್ಲವೂ ರಾಜಕೀಯ ಷಡ್ಯಂತ್ರ ಎಂದು ಹೇಳಿದ್ದಾರೆ. 

‘ನನ್ನ ಜೀವನ ಏನು ಎಂಬುದು ನನ್ನ ಕ್ಷೇತ್ರದ ಜನರಿಗೆ ತಿಳಿದಿದೆ‌. ಇದಕ್ಕೆಲ್ಲ ತಲೆಕೆಡಸಿಕೊಳ್ಳುವ ಅಗತ್ಯವಿಲ್ಲ. ನನ್ನನ್ನು ಬೆದರಿಸುವ ಉದ್ದೇಶದಿಂದ ಈ ರೀತಿಯ ಕೀಳು ರಾಜಕೀಯ ‌ಮಾಡಲಾಗಿದೆ. ಹುಣಸೂರು ಕ್ಷೇತ್ರದಲ್ಲಿ ನನ್ನ ಎದುರಾಳಿಗಳು ನನ್ನ ಅಣಕು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಇಂತಹ ಬೆದರಿಕೆಗೆ ಬಗ್ಗುವ ಜಾಯಮಾನ ನನ್ನದಲ್ಲ,’ ಎಂದು ಅವರು ತಿಳಿಸಿದ್ದಾರೆ. 

‘ನನ್ನ ವೈಯಕ್ತಿಕ ಜೀವನ,‌ ನನ್ನ ಆರ್ಥಿಕ ಪರಿಸ್ಥಿತಿ ಎಲ್ಲ ವಿಚಾರಗಳನ್ನು ‘ಹಳ್ಳಿ ಹಕ್ಕಿ’ ಪುಸ್ತಕದಲ್ಲಿ ದಾಖಲಿಸಿದ್ದೇನೆ. ನನ್ನ ಚಾರಿತ್ರ್ಯ ಹರಣ ಮಾಡುವ‌ ಪ್ರಯತ್ನ ಮಾಡಲಾಗಿದೆ. ಇಂತಹದನ್ನು‌ ಬೇಕಾದಷ್ಟು ನೋಡಿದ್ದೇವೆ. ಇದಕ್ಕೆಲ್ಲ ಬೆದರುವುದಿಲ್ಲ. ಸಚಿವ ಸ್ಥಾನ ಸೇರಿದಂತೆ ಯಾವುದೇ ಆಮಿಷಕ್ಕೆ ನಾನು ಒಪ್ಪದ‌ ಕಾರಣ ಈ ಹೊಸ ಪ್ರಯೋಗವನ್ನು ಮಾಡಲಾಗಿದೆ. ಇಂತಹ ಕುತಂತ್ರಗಳು ಫಲ ನೀಡುವುದಿಲ್ಲ,’ ಎಂದೂ ಅವರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 30

  Happy
 • 2

  Amused
 • 3

  Sad
 • 1

  Frustrated
 • 7

  Angry

Comments:

0 comments

Write the first review for this !