ಗುರುವಾರ , ಡಿಸೆಂಬರ್ 5, 2019
21 °C

ಸಿದ್ದರಾಮಯ್ಯಗೂ ಏಕವಚನ ಬಳಸಬೇಕಾಗುತ್ತದೆ: ಶೆಟ್ಟರ್ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಸ್ಪೀಕರ್‌ ಸ್ಥಾನದ ಘನತೆ ಮರೆತು, ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅವನು, ಇವನು ಎಂದು ಮಾನತಾಡಿರುವ ಸಿದ್ದರಾಮಯ್ಯ ಅವರಿಗೂ ಇನ್ನು ಮುಂದೆ ಏಕವಚನ ಬಳಸಬೇಕಾಗುತ್ತದೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಎಚ್ಚರಿಕೆ ನೀಡಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಸಿದ್ದರಾಮಯ್ಯ, ಈ ರೀತಿ ಮಾತನಾಡುವುದನ್ನು ನೋಡಿದರೆ ಅವರಿಗೆ ಮನೋರೋಗ ಇರಬೇಕು’ ಎಂದರು.

ಇದನ್ನೂ ಓದಿ... ಅವನ್ಯಾರೊ ಪುಣ್ಯಾತ್ಮನ ಸ್ಪೀಕರ್ ಮಾಡಿಬಿಟ್ಟಿದ್ದಾರೆ: ಸಿದ್ದರಾಮಯ್ಯ

‘ಸ್ಪೀಕರ್‌ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವವರನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಸಿದ್ದರಾಮಯ್ಯ ಅವರ ಈ ಸೊಕ್ಕು ಹೆಚ್ಚು ದಿನ ನಡೆಯುವುದಿಲ್ಲ. ಕೂಡಲೇ ಅವರು, ಸ್ಪೀಕರ್ ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದರು.

ಇನ್ನಷ್ಟು... 

ಯಾರಿಗೆ ಅಂತ ಪ್ರಶ್ನೆ | ಟ್ವಿಟರ್‌ನಲ್ಲಿ ಹರಿದಾಡ್ತಿದೆ ದೇವರೆ ಬುದ್ಧಿಕೊಡು ಟ್ವೀಟ್

ಸಿದ್ದರಾಮಯ್ಯ ಚೀಪ್‌ ಮೆಂಟಾಲಿಟಿ ರಾಜಕಾರಣಿ: ಶೋಭಾ ಕರಂದ್ಲಾಜೆ ವಾಗ್ದಾಳಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು