ಮಂಗಳವಾರ, ಜನವರಿ 21, 2020
22 °C

ಕ್ರೈಸ್ತರ ಮೇಲೆ ದಾಳಿ ನಡೆದಾಗ ಎಲ್ಲಿ ಹೋಗಿದ್ದರು: ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹಿಂದಿನ ವರ್ಷಗಳಲ್ಲಿ 19 ಚರ್ಚ್‌ಗಳ ಮೇಲೆ ದಾಳಿ ನಡೆಯಿತು. ಮಕ್ಕಳನ್ನು ಹತ್ಯೆ ಮಾಡಿ, ಬೈಬಲ್ ಸುಟ್ಟರು. ಕ್ರೈಸ್ತ ಸನ್ಯಾಸಿನಿಯರ ಮೇಲೆ ಅತ್ಯಾಚಾರ ನಡೆಯಿತು. ಈಗ ಬೊಬ್ಬೆ ಹಾಕುತ್ತಿರುವವರು ಆಗ ಏನು ಮಾಡುತ್ತಿದ್ದರು’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರಶ್ನಿಸಿದರು.

ಜೆಡಿಎಸ್ ಸಭೆಯ ನಂತರ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ‘ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆದಾಗ ಒಡಿಸ್ಸಾ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ನಾನೊಬ್ಬನೇ ಎಲ್ಲೆಡೆ ಹೋರಾಟ ಮಾಡಬೇಕಿತ್ತು’ ಎಂದರು.

‘ಇದು ಜಾತ್ಯತೀತ ರಾಷ್ಟ್ರ. ಪೌರತ್ವ (ತಿದ್ದುಪಡಿ) ಕಾಯ್ದೆ ವ್ಯಾಪ್ತಿಗೆ ಎಲ್ಲಾ ಸಮುದಾಯವನ್ನೂ ಸೇರಿಸಿದ್ದು, ಮುಸ್ಲಿಮರನ್ನು ಕೈಬಿಡಲಾಗಿದೆ. ಸಂವಿಧಾನ ಎಲ್ಲಾ ಧರ್ಮಗಳಿಗೆ ರಕ್ಷಣೆ ನೀಡಬೇಕು. ಇದನ್ನೆಲ್ಲ ರಾಜಕಾರಣಕ್ಕಲ್ಲದೆ, ಇನ್ನೇತಕ್ಕೆ ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಶಾಸಕ ಡಿ.ಕೆ.ಶಿವಕುಮಾರ್ ಯೇಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವ ವಿಚಾರದಲ್ಲಿ ತಪ್ಪು ಕಂಡುಹಿಡಿಯಲು ಹೋಗಲ್ಲ. ಆದರೆ ಮಂಗಳೂರು, ಬೆಂಗಳೂರಿನಿಂದ ಏಕೆ ಕನಕಪುರಕ್ಕೆ ಹೋಗಬೇಕು’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು