ಗೌರಿಬಿದನೂರು: ತಾಲ್ಲೂಕಿನ ಗಡಿಭಾಗದ ಮೂಲಕ ಆಂಧ್ರದಿಂದ ಚಿಕ್ಕಬಳ್ಳಾಪುರಕ್ಕೆ ಮಾಂಸವನ್ನು ಸಾಗಿಸುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾದ ಬೆನ್ನಲ್ಲೆ ಆತನನ್ನು ತಡೆದು ವಿಚಾರಿಸಿದ್ದ ಕಾರ್ಯಪಡೆ ಯುವಕರು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಪೊಲೀಸರಿಗೂ ಸೋಂಕು ಹರಡಿರಬಹುದು ಎಂದು ಶಂಕಿಸಿ ಆತನ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕ್ವಾರಂಟೈನ್ ಮಾಡಲು ಆರೋಗ್ಯ ಅಧಿಕಾರಿಗಳು ಮುಂದಾಗಿದ್ದಾರೆ.

ಇತ್ತೀಚೆಗೆ ಆಂದ್ರಪ್ರದೇಶದ ಹಿಂದೂಪುರದಿಂದ ಗಡಿ ಭಾಗದ ಗ್ರಾಮಗಳಾದ ಕಡಗತ್ತೂರು ಮೂಲಕ ವ್ಯಕ್ತಿಯೋರ್ವ ತರಕಾರಿ ಮಾರುವ ನೆಪದಲ್ಲಿ ದನದ ಮಾಂಸವನ್ನು ಜಿಲ್ಲಾ ಕೇಂದ್ರದತ್ತ ಸಾಗಿಸುತ್ತಿದ್ದು, ಇದನ್ನು ಕಂಡ ಚಂದನದೂರಿನ ಕಾರ್ಯಪಡೆಯ ಯುವಕರು ಕೂಡಲೇ ಆತನನ್ನು ತಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಆ ವ್ಯಕ್ತಿಯನ್ನು ಯುವಕರು ಹಿಡಿದು ತಳಿಸಿದ್ದಾರೆ. ಬಳಿಕ ಸ್ಥಳೀಯ ಹಾಲಗಾನಹಳ್ಳಿ ಗ್ರಾಮ ಪಂಚಾಯಿತಿಯ ಸಿಬ್ಬಂದಿ, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಆತನ ವಿರುದ್ದ ಕ್ರಮ ಕೈಗೊಂಡು ಗ್ರಾಮಾಂತರ ಠಾಣೆಯಲ್ಲಿ ಇರಿಸಿದ್ದರು. ಬಳಿಕ ಆರೋಗ್ಯ ಅಧಿಕಾರಿಗಳು ಆತನನ್ನು ತಪಾಸಣೆ ನಡೆಸಿದಾಗ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ.

ಈ ಪ್ರಕರಣದಿಂದ ಭಯಭೀತರಾದ ಅಧಿಕಾರಿಗಳು ಕೂಡಲೇ ಆತನ ಪ್ರಯಾಣ ಚರಿತ್ರೆಯ ಬಗ್ಗೆ ಮಾಹಿತಿ ಪಡೆದಾಗ ಚಂದನದೂರಿನ 7 ಯುವಕರು ಆತನನೊಂದಿಗೆ ಸಂಪರ್ಕ ಬೆಳೆಸಿರಬಹುದು ಎಂದು ಶಂಕಿತರನ್ನು ಶುಕ್ರವಾರ ತಡ ರಾತ್ರಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಇನ್ನು ಆ ವ್ಯಕ್ತಿಯನ್ನು ಇರಿಸಲಾಗಿದ್ದ ಗ್ರಾಮಾಂತರ ಠಾಣೆಗೆ ಸೋಂಕು ನಿವಾರಕವನ್ನು ಸಿಂಪರಣೆ ಮಾಡಿಸಿ ಪೊಲೀಸ್ ಸಿಬ್ಬಂದಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.