ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಸಾಹಿತಿ ಬಿ.ಎ.ಸನದಿ ಇನ್ನಿಲ್ಲ

Last Updated 31 ಮಾರ್ಚ್ 2019, 5:05 IST
ಅಕ್ಷರ ಗಾತ್ರ

ಕಾರವಾರ/ ಕುಮಟಾ: ಹಿರಿಯ ಸಾಹಿತಿ, ವಿಮರ್ಶಕಬಿ.ಎ.ಸನದಿ (86) ಕುಮಟಾದದ ಹಳೆ ಹೆರವಟ್ಟಾದ ತಮ್ಮ ನಿವಾಸದಲ್ಲಿ ಭಾನುವಾರ ಬೆಳಗಿನ ಜಾವ ನಿಧನರಾದರು. ಅವರು ಹಲವು ದಿನಗಳಿಂದ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದರು.

10ಕ್ಕೂ ಹೆಚ್ಚು ಕವನ ಸಂಕಲನಗಳು, 10 ಅನುವಾದಿತ ಕೃತಿಗಳು, ಶಿಶು ಸಾಹಿತ್ಯದ ಐದು ಕೃತಿಗಳು, ಆರು ವಿಮರ್ಶಾ ಕೃತಿಗಳು, ಸಂಪಾದಿತ ಎಂಟು ಕೃತಿಗಳು, ಎರಡು ನಾಟಕಗಳು, ಮೂರು ವ್ಯಕ್ತಿ ಚಿತ್ರಗಳನ್ನು ಅವರು ರಚಿಸಿದ್ದಾರೆ.

ಅವರ ಸಾಹಿತ್ಯ ಕೃಷಿಯ ಬಗ್ಗೆ ನಾಡಿನ ಪ್ರಸಿದ್ಧ ಸಾಹಿತಿಗಳು ‘ಸನದಿ ಸಾಹಿತ್ಯ ಸಮೀಕ್ಷೆ’ ಎಂಬ ಸರಣಿಯಲ್ಲಿ ಏಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕೊಂಕಣಿ, ತುಳು, ಉರ್ದು, ಗುಜರಾತಿ, ಮಲಯಾಳಂನ ಪ್ರಸಿದ್ಧ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು.

ಸನದಿ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸರ್ಕಾರ ಮತ್ತು ವಿವಿಧ ಸಾಹಿತ್ಯ ಸಂಘಟನೆಗಳಿಂದ ಹತ್ತಾರು ಪ್ರಶಸ್ತಿಗಳು, ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.

'ಪಂಪ ಪ್ರಶಸ್ತಿ' (2015ರಲ್ಲಿ), ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1992ರಲ್ಲಿ), ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರ ಡಾಕ್ಟರೇಟ್ (2005ರಲ್ಲಿ), ಎಸ್.ಎಸ್.ಭೂಸನೂರಮಠ ಪ್ರಶಸ್ತಿ (1996ರಲ್ಲಿ), ದೆಹಲಿ ಕರ್ನಾಟಕ ಸಂಘದಿಂದ 'ಶ್ರೇಷ್ಠ ಹೊರನಾಡು ಕನ್ನಡಿಗ' (1991ರಲ್ಲಿ) ಪ್ರಶಸ್ತಿ, ಮಕ್ಕಳ ಸಾಹಿತ್ಯಕ್ಕಾಗಿ ಪುತ್ತೂರು ಶಿವರಾಮ ಕಾರಂತ ಸಂಶೋಧನಾ ಕೇಂದ್ರದಿಂದ 'ನಿರಂಜನ' ಪ್ರಶಸ್ತಿಯೂ ಸೇರಿದಂತೆ ವಿವಿಧ ಪುರಸ್ಕಾರಗಳು ಅವರಿಗೆ ಪ್ರದಾನವಾಗಿವೆ.

ಬೆಳಗಾವಿ ತಾಲ್ಲೂಕಿನ ಶಿಂದೊಳ್ಳಿಯವರಾದ ಸನದಿ ಅವರ ಪತ್ನಿ ಕುಮಟಾದವರು. ಆರೋಗ್ಯ ಸಮಸ್ಯೆ ಇದ್ದ ಕಾರಣ ಕರಾವಳಿ ಭಾಗದಲ್ಲಿ ನೆಲೆಸುವಂತೆ ಅವರಿಗೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಕುಮಟಾದಲ್ಲಿ 25 ವರ್ಷಗಳಿಂದ ನೆಲೆಸಿ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿದ್ದರು.

ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಶಿಂದೊಳ್ಳಿಯಲ್ಲಿ ಭಾನುವಾರ ಸಂಜೆಯ ನಂತರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕುಟುಂಬದವರ ಸಂಪರ್ಕ ಸಂಖ್ಯೆ: 9036997538 (ಮೆಹ್ತಾಬ್ ಅಲಿ)

ಬಿ.ಎ.ಸನದಿ ಅವರ ಕುಮಟಾದ ಮನೆಗೆ ಸಾಹಿತ್ಯಾಭಿಮಾನಿಗಳು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಬಿ.ಎ.ಸನದಿ ಅವರ ಕುಮಟಾದ ಮನೆಗೆ ಸಾಹಿತ್ಯಾಭಿಮಾನಿಗಳು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT