ಭಾನುವಾರ, ಆಗಸ್ಟ್ 18, 2019
25 °C

ಯೋಗ್ಯತೆ ಇಲ್ಲದಿದ್ರೆ ಪಕ್ಕಕ್ಕೆ ಹೋಗ್ಲಿ, ನಾವು ಸರ್ಕಾರ ಮಾಡ್ತೀವಿ: ಯಡಿಯೂರಪ್ಪ

Published:
Updated:

ಬೆಂಗಳೂರು: ‘ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಿಶ್ಚಿತ’ ಎನ್ನುವ ದೇವೇಗೌಡರ ಹೇಳಿಕೆಯನ್ನು ಆಕ್ಷೇಪಿಸಿರುವ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ‘ಯೋಗ್ಯತೆ ಇಲ್ಲದಿದ್ರೆ ಅಧಿಕಾರ ಬಿಟ್ಟು ಹೊರಗೆ ಹೋಗಿ’ ಎಂದು ಗುಡುಗಿದ್ದಾರೆ.

‘ಅಧಿಕಾರ ನಡೆಸಲು ಕೈಲಾಗದೇ ಇದ್ದರೆ, ಯೋಗ್ಯತೆ ಇಲ್ಲದೇ ಇದ್ದರೆ ಅಧಿಕಾರ ಬಿಟ್ಟು ನಡೆಯಲಿ. ನಾವು ಸರ್ಕಾರ ರಚಿಸುತ್ತೇವೆ. ಚುನಾವಣೆ ಈಗ ಅನಗತ್ಯ’ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

‘ಹಿರಿಯ ರಾಜಕಾರಣಿ ದೇವೇಗೌಡರು ಸತ್ಯವನ್ನೇ ಹೇಳಿದ್ದಾರೆ. ಸರ್ಕಾರ ಬೀಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಒಂದು ವರ್ಷದಿಂದ ಹೇಳುತ್ತಿದ್ದರು. ಈಗ ಸತ್ಯ ರಾಜ್ಯದ ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್ ನಾಯಕರು ಕಚ್ಚಾಟ, ಮೈತ್ರಿ ಪಕ್ಷ ದಲ್ಲಿ ಗೊಂದಲದಿಂದ ಸರ್ಕಾರ ಬೀಳಲಿದೆ ಎಂಬುದು ಗೌಡರ ಮಾತಿನಿಂದ ಸ್ಪಷ್ಟವಾಗುತ್ತದೆ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಲೇವಡಿ ಮಾಡಿದ್ದಾರೆ.

ಇನ್ನಷ್ಟು...

ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ: ‘ಸರ್ಕಾರ ಎಷ್ಟ್ ದಿನ ಇರುತ್ತೋ ಗೊತ್ತಿಲ್ಲ’

ಮಧ್ಯಂತರ ಚುನಾವಣೆ ಸಂಭವ: ಯೋಗಾಭ್ಯಾಸದ ನಂತರ ದೇವೇಗೌಡ ಹೇಳಿಕೆ

ಕಾಂಗ್ರೆಸ್ ಪ್ರತಿಕ್ರಿಯೆ | ‘ದೇವೇಗೌಡರು ದೊಡ್ಡವರು, ಯೋಚನೆ ಮಾಡಿ ಮಾತಾಡ್ತಾರೆ’

Post Comments (+)