ಬುಧವಾರ, ಆಗಸ್ಟ್ 4, 2021
27 °C

ಪೈಲಟ್‌ಗಳ ಪರವಾನಗಿಯಲ್ಲಿ ಅಕ್ರಮ ನಡೆದಿಲ್ಲ: ಪಾಕಿಸ್ತಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಪೈಲಟ್‌ಗಳಿಗೆ ನೀಡಿರುವ ಪರವಾನಗಿ ಸರಿಯಾಗಿದೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರವು ಒಮನ್‌ಗೆ ಸ್ಪಷ್ಟನೆ ನೀಡಿದೆ.

ಎಲ್ಲ ಪೈಲಟ್‌ಗಳಿಗೆ ನೀಡಿರುವ ಪರವಾನಗಿ ಸರಿಯಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿ ಸತ್ಯಕ್ಕೆ ದೂರವಾದುದು ಎಂದು ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರದ ಡೈರೆಕ್ಟರ್‌ ಜನರಲ್‌ ಹಸನ್‌ ನಾಸಿರ್‌ ಅವರು ಒಮನ್ ನಾಗರಿಕ ವಿಮಾನಯಾನ ಸಂಸ್ಥೆಯ‌ ಹಂಗಾಮಿ ಪ್ರಧಾನ ನಿರ್ದೇಶಕ ಮುಬಾರಕ್‌ ಸಲೇಹ್‌ ಅಲ್‌ ಗಿಲಾನಿ ಅವರಿಗೆ ಇದೇ 13ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಇದು ಪೈಲಟ್‌ಗಳ ಸುರಕ್ಷತೆಯ ವಿಷಯವಾಗಿದೆ. ನಾವು ಈಗಾಗಲೇ 104 ಪೈಲಟ್‌ಗಳಲ್ಲಿ 96 ಪೈಲಟ್‌ಗಳ ಪರವಾನಗಿಯನ್ನು ಪರಿಶೀಲಿಸಿದ್ದೇವೆ ಎಂದು ಅವರು ಹೇಳಿದ್ದಾರೆ. 

ಪಾಕಿಸ್ತಾನದಲ್ಲಿ 860 ಮಂದಿ ಪೈಲಟ್‌ಗಳಿದ್ದಾರೆ. ಈ ಪೈಕಿ 260 ಪೈಲಟ್‌ಗಳು ಪರೀಕ್ಷೆಗೆ ಹಾಜರಾಗಿಲ್ಲ. ಅಲ್ಲದೆ 30ರಷ್ಟು ಪೈಲಟ್‌ಗಳು ನಕಲಿ ಅಥವಾ ವಾಮಮಾರ್ಗದ ಮೂಲಕ ಪರವಾನಗಿ ಹೊಂದಿರಬಹುದು. ಅವರಿಗೆ ವಿಮಾನ ಹಾರಾಟದ ಅನುಭವ ಇಲ್ಲ ಎಂದು ಪಾಕಿಸ್ತಾನ ವಿಮಾನಯಾನ ಸಚಿವ ಗುಲಾಮ್ ಸರ್ವಾರ್ ಕಳೆದ ತಿಂಗಳು ಆರೋಪಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು