ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಬೆನಾನ್ ರಾಜಧಾನಿಯಲ್ಲಿ ಸ್ಫೋಟಿಸಿದ್ದು 2,750 ಟನ್ ಅಮೋನಿಯಂ ನೈಟ್ರೇಟ್

Last Updated 5 ಆಗಸ್ಟ್ 2020, 1:33 IST
ಅಕ್ಷರ ಗಾತ್ರ

ಬೈರೂತ್: ಬೈರೂತ್ ಬಂದರು ಗೋದಾಮಿನಲ್ಲಿ ಸಂಗ್ರಹವಾಗಿದ್ದ ಸುಮಾರು 2,750 ಟನ್ ಅಮೋನಿಯಂ ನೈಟ್ರೇಟ್ ಮಂಗಳವಾರ ಸ್ಫೋಟಿಸಿ ರಾಜಧಾನಿಯ ಬಹುತೇಕ ಭಾಗಗಳನ್ನು ಧ್ವಂಸಗೊಳಿಸಿದೆಎಂದು ಪ್ರಧಾನಿ ಹಸನ್ ಡಯಾಬ್ ಹೇಳಿದ್ದಾರೆ.

ಪ್ರಧಾನಿಯ ಪರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕ್ತಾರರು, ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಗೋದಾಮಿನಲ್ಲಿ ಕಳೆದ ಆರು ವರ್ಷಗಳಿಂದ 2,750 ಟನ್ ಅಮೋನಿಯಂ ನೈಟ್ರೇಟ್ ದಾಸ್ತಾನು ಇರಿಸಲಾಗಿತ್ತು. ಇದು ಕ್ಷಮಾರ್ಹವಲ್ಲ ಎಂದುರಕ್ಷಣಾ ಮಂಡಳಿ ಸಭೆಯಲ್ಲಿ ಪ್ರಧಾನಿ ಹೇಳಿರುವುದಾಗಿ ತಿಳಿಸಿದ್ದಾರೆ.

ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಮತ್ತು ಈ ವಿಚಾರದಲ್ಲಿ ನಾವು ಮೌನವಾಗಿರಲು ಸಾಧ್ಯವಿಲ್ಲ ಎಂದು ಪ್ರಧಾನಿ ತಿಳಿಸಿದ್ದಾರೆ.

ಮಂಗಳವಾರ ಸಂಭವಿಸಿರುವ ಸ್ಫೋಟದಲ್ಲಿ ಈವರೆಗೆ 73ಮಂದಿ ಮೃತಪಟ್ಟಿದ್ದು, 3,700ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸ್ಫೋಟವು ಇಡೀ ಬೈರೂತ್ ನಗರವನ್ನೇ ಅಲುಗಾಡಿಸಿದ್ದು, ಕಟ್ಟಡಗಳ ಗಾಜುಗಳು ಪುಡಿಪುಡಿಯಾಗಿವೆ. ಸ್ಫೋಟ ಸಂಭವಿಸಿರುವ ಸುತ್ತ ಒಂದು ಮೈಲಿ ಕಟ್ಟಡಗಳು ಕುಸಿದು ಅವಶೇಷಗಳ ಅಡಿಯಲ್ಲಿ ಕೂಡ ಹಲವು ಜನ ಸಿಲುಕಿದ್ದಾರೆ. ಬಂದರು ಪ್ರದೇಶದಲ್ಲಿದ್ದ ಗೋದಾಮುಗಳ ಕಿಟಕಿ ಗಾಜುಗಳು ಮತ್ತು ಬಾಗಿಲುಗಳು ಹಾನಿಗೊಳಗಾಗಿವೆ. ಈ ಕುರಿತಾದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT