ಶನಿವಾರ, ಜುಲೈ 24, 2021
21 °C

ಕೋವಿಡ್‌ಗಿಂತ ಅಪಾಯಕಾರಿ ನ್ಯುಮೋನಿಯಾ: ಚೀನಾ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಕೋವಿಡ್‌–19ಗಿಂತ ಅಪಾಯಕಾರಿಯಾಗಿರುವ, ‘ಅಪರಿಚಿತ ನ್ಯುಮೋನಿಯಾ’ ಸೋಂಕು ಕಜಕಸ್ತಾನದಲ್ಲಿ ಕಾಣಿಸಿಕೊಂಡಿದ್ದು, ನಾಗರಿಕರು ಎಚ್ಚರದಿಂದ ಇರಬೇಕು ಎಂದು ಅಲ್ಲಿ ನೆಲೆಸುತ್ತಿರುವ ತನ್ನ ದೇಶದ ನಾಗರಿಕರಿಗೆ ಚೀನಾ ಎಚ್ಚರಿಕೆ ನೀಡಿದೆ.

‘ಈ ನ್ಯುಮೋನಿಯಾ ಕೋವಿಡ್‌ಗಿಂತಲೂ ಹೆಚ್ಚು ಅಪಾಯಕಾರಿ ಮತ್ತು ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಕಜಕಸ್ತಾನದಲ್ಲಿ ಮೊದಲ ಆರು ತಿಂಗಳಲ್ಲಿ ಈ ಕಾಯಿಲೆಯು 1,772 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಜೂನ್‌ ತಿಂಗಳೊಂದರಲ್ಲೇ 628 ಮಂದಿ ಇದಕ್ಕೆ ಬಲಿಯಾಗಿದ್ದಾರೆ. ಬಲಿಯಾದವರಲ್ಲಿ ಚೀನಾದ ನಾಗರಿಕರೂ ಇದ್ದಾರೆ’ ಎಂದು ಮಧ್ಯ ಏಷ್ಯಾದಲ್ಲಿರುವ ಚೀನಾದ ರಾಯಭಾರ ಕಚೇರಿಯು ತನ್ನ ಸಾಮಾಜಿಕ ಜಾಲತಾಣ ‘ವಿಚಾಟ್‌’ನಲ್ಲಿ ತಿಳಿಸಿದೆ.

ಕೋವಿಡ್‌ನಿಂದ ಸೋಂಕಿತರಾದವರಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚು ಜನರು ಹೊಸ ನ್ಯುಮೋನಿಯಾದ ಸೋಂಕಿಗೆ ಒಳಗಾಗಿದ್ದಾರೆ ಎಂದು ಕಜಕಸ್ತಾನದ  ಆರೋಗ್ಯ ಸಚಿವರು ಹೇಳಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು