ಸೋಮವಾರ, ಆಗಸ್ಟ್ 2, 2021
28 °C

Covid-19 World update | ಅಮೆರಿಕದಲ್ಲಿ ಒಂದೇ ದಿನ 66528 ಪ್ರಕರಣ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Covid-19

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಶನಿವಾರ ಒಂದೇ ದಿನ 66,528 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ, ಕಳೆದ ಐದು ದಿನಗಳಿಂದ ಸತತವಾಗಿ ಹೊಸ ಪ್ರಕರಣಗಳ ಸಂಖ್ಯೆ 60 ಸಾವಿರ ದಾಟುತ್ತಿದೆ.

ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಮಾಹಿತಿ ಪ್ರಕಾರ, ಅಮೆರಿಕದಲ್ಲಿ ಒಟ್ಟು 3,242,073 ಮಂದಿ ಸೋಂಕಿತರಾಗಿದ್ದಾರೆ. ಈವರೆಗೆ 134,729 ಜನ ಸಾವಿಗೀಡಾಗಿದ್ದಾರೆ.

ಬ್ರಿಟನ್‌ನಲ್ಲಿ 2.90 ಲಕ್ಷ ದಾಟಿದ ಪ್ರಕರಣ: ಬ್ರಿಟನ್‌ನಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈವರೆಗೆ 290,502 ಜನ ಸೋಂಕಿತರಾಗಿದ್ದಾರೆ. 44,883 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದಾಗಿ ಈವರೆಗೆ ಬ್ರೆಜಿಲ್‌ನಲ್ಲಿ 71,469, ರಷ್ಯಾದಲ್ಲಿ 11,188, ಪೆರುವಿನಲ್ಲಿ 11,682, ಚಿಲೆಯಲ್ಲಿ 6,881, ಮೆಕ್ಸಿಕೊದಲ್ಲಿ 34,730, ದಕ್ಷಿಣ ಆಫ್ರಿಕಾದಲ್ಲಿ 3,971, ಇರಾನ್‌ನಲ್ಲಿ 12,635, ಸ್ಪೇನ್‌ನಲ್ಲಿ 28,403 ಮತ್ತು ಪಾಕಿಸ್ತಾನದಲ್ಲಿ 5,123 ಜನ ಸಾವಿಗೀಡಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು