ಭಾನುವಾರ, ಜೂಲೈ 5, 2020
22 °C

ಷಿಕಾಗೊದಲ್ಲಿ ಗುಂಡಿನ ದಾಳಿಗೆ 3 ಮಕ್ಕಳ ಸಾವು 

ಎಪಿ Updated:

ಅಕ್ಷರ ಗಾತ್ರ : | |

Prajavani

ಷಿಕಾಗೊ: ವಾರಾಂತ್ಯದ ಸಂಭ್ರಮದಲ್ಲಿ ತೊಡಗಿದ್ದ ಜನರ ಮೇಲೆ ಬಂದೂಕುಧಾರಿಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ ಮೂರು ಮಕ್ಕಳು ಅಸುನೀಗಿದ್ದಾರೆ.

ಈ ಪೈಕಿ, 10 ವರ್ಷದ ಬಾಲಕಿಯ ತಲೆಗೇ ಗುಂಡು ಹೊಕ್ಕಿದೆ. ಒಂದು ವರ್ಷದ ಮಗು ಮತ್ತು 17 ವರ್ಷದ ಬಾಲಕನೂ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಲೋಗಾನ್‌ ಸ್ಕ್ವೇರ್‌ನಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

‘ಪ್ರಾಥಮಿಕ ಮಾಹಿತಿ ಪ್ರಕಾರ, ಪುರುಷರ ಗುಂಪೊಂದು ಗುಂಡಿನ ಚಕಮಕಿಯಲ್ಲಿ ತೊಡಗಿತ್ತು. ಪರಸ್ಪರರು ಗುಂಡಿನ ದಾಳಿ ನಡೆಸುತ್ತಿದ್ದರು. ಈ ವೇಳೆ ಮಕ್ಕಳು ಬಲಿಯಾಗಿದ್ದಾರೆ. ಈವರೆಗೆ ಯಾರನ್ನೂ ವಶಕ್ಕೆ ಪಡೆದಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು