ಗುರುವಾರ , ಆಗಸ್ಟ್ 5, 2021
21 °C

ಗಡಿ ವಿವಾದ: ಭೂತಾನ್ ಜೊತೆಗೆ ಭಾರತ ತೆರೆಮರೆಯ ಮಾತುಕತೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಭೂತಾನ್‌ನ ಅಭಯಾರಣ್ಯವೊಂದು ತನ್ನ ದೇಶದ ಗಡಿಯಲ್ಲಿದೆ ಎಂಬ ಚೀನಾದ ಹಕ್ಕು ಸ್ಥಾಪನೆ ಯತ್ನದ ನಂತರ ಭೂತಾನ್ ಆಡಳಿತದೊಂದಿಗೆ ಭಾರತ ತೆರೆಮರೆಯ ಮಾತುಕತೆ ಆರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಲಡಾಖ್‌ನ ಗಾಲ್ವನ್ ಕಣಿವೆಯಿಂದ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿರುವ ಚೀನಾ, ಭಾರತವನ್ನು ಕೆರಳಿಸುವ ಉದ್ದೇಶದಿಂದಲೇ ಭೂತಾನ್‌ನಲ್ಲಿ ಗಡಿ ವಿವಾದ ಕೆದಕಿದೆ. ಈ ಅಭಯಾರಣ್ಯವು ಅರುಣಾಚಲ ಪ್ರದೇಶದೊಂದಿಗೆ ಗಡಿ ಹಂಚಿಕೊಳ್ಳುತ್ತದೆ. ಎಂದು ವಿಶ್ಲೇಷಿಸಲಾಗಿದೆ.

ಇದು ಚೀನಾ ಮತ್ತು ಭೂತಾನ್ ದೇಶಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ವಿಚಾರವಾಗಿರುವ ಕಾರಣ ಭಾರತವು ಈ ವಿವಾದದಲ್ಲಿ ನೇರವಾಗಿ ಪಾಲ್ಗೊಂಡಿಲ್ಲ. ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಭೂತಾನ್‌ಗೆ ಅಗತ್ಯ ರಾಜತಾಂತ್ರಿಕ ನೆರವು ನೀಡುತ್ತಿದೆ.

ಗಡಿ ವಿವಾದದ ಬಗ್ಗೆ ಈವರೆಗೆ  ಚೀನಾ ಜೊತೆಗೆ ಭೂತಾನ್ 24 ಸುತ್ತುಗಳ ಮಾತುಕತೆ ನಡೆಸಿದೆ. ಆದರೆ ಪೂರ್ವ ವಲಯದ ಗಡಿಯ ಬಗ್ಗೆ ಯಾವುದೆ ವಿವಾದ ಇರಲಿಲ್ಲ ಎಂದು ಭೂತಾನ್‌ನ ಮೂಲಗಳನ್ನು ಉಲ್ಲೇಖಿಸಿ 'ದಿ ಪ್ರಿಂಟ್' ಜಾಲತಾಣ ವರದಿ ಮಾಡಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಭೂತಾನ್‌ನ ಪ್ರಮುಖ ದೈನಿಕ 'ದಿ ಭೂತಾನಿಸ್‌'ನ ಸಂಪಾದಕ ತೆನ್ಜಿಂಗ್ ಲ್ಯಾಮ್ಸಂಗ್‌ ಟ್ವೀಟ್ ಮಾಡಿದ್ದು, ಸಕ್ತೆಂಗ್‌ ಅಭಯಾರಣ್ಯವು ಭೂತಾನ್‌ಗೆ ಸೇರಿದ್ದು ಎಂದು ಚೀನಾದ 1977ರ ಭೂಪಟ ಸ್ಪಷ್ಟವಾಗಿ ಹೇಳುತ್ತದೆ. ಈಗೇಕೆ ಈ ವಿವಾದ' ಎಂದು ಪ್ರಶ್ನಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು