ಭಾನುವಾರ, ಜೂಲೈ 12, 2020
22 °C

ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಗೆ ಇಸ್ರೇಲ್‌ನಿಂದ ಸೋಂಕುನಿವಾರಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೆರುಸಲೆಂ: ಜೈವಿಕ ಯುದ್ಧ ನಡೆದ ಸಂದರ್ಭದಲ್ಲಿ ಇಸ್ರೇಲ್‌ ಭದ್ರತಾ ಪಡೆಗಳ ಸುರಕ್ಷತೆಗಾಗಿ ಅಭಿವೃದ್ಧಿಪಡಿಸಿದ್ದ ನೂತನ ಆ್ಯಂಟಿಸೆಪ್ಟಿಕ್‌ ಸೋಂಕುನಿವಾರಕವನ್ನು, ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ಭಾರತ ಬಳಸಿಕೊಳ್ಳಲಿದೆ. 

ಇಸ್ರೇಲ್‌ ಜೈವಿಕ ಸಂಶೋಧನಾ ಸಂಸ್ಥೆ(ಐಐಬಿಆರ್‌) ಈ ಸೋಂಕುನಿವಾರಕವನ್ನು ಅಭಿವೃದ್ಧಿಪಡಿಸಿದ್ದು, ಟೆರಾ ನೊವೆಲ್‌ ಎಂಬ ಇಸ್ರೇಲ್‌ ಮೂಲದ ಕಂಪನಿಯೇ ಇದರನ್ನು ಮಾರಾಟ ಮಾಡುತ್ತಿದೆ. ಕೊರೊನಾ ವೈರಸ್‌ ಸೇರಿದಂತೆ ಶೇ 100ರಷ್ಟು ಬ್ಯಾಕ್ಟೀರಿಯಾ, ವೈರಾಣುಗಳನ್ನು ನಾಶಪಡಿಸುವ ಸಾಮರ್ಥ್ಯ ಈ ದ್ರಾವಣಕ್ಕಿದ್ದು, ಇದರ ಪರಿಣಾಮ ಬಹುಕಾಲದವರೆಗೂ ಇರಲಿದೆ.  

ಭಾರತದಲ್ಲಿರುವ ಏರ್‌ಪೋರ್ಟ್‌ಗಳು, ಆಸ್ಪತ್ರೆ, ಬಸ್‌ ನಿಲ್ದಾಣ, ಸಾರ್ವಜನಿಕ ಸಾರಿಗೆ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ‌ ಸೋಂಕು ಹರಡದಂತೆ ತಡೆಯಲು ಈ ದ್ರಾವಣವನ್ನು ಬಳಸಲು ನಿರ್ಧರಿಸಲಾಗಿದೆ ಎಂದು ಭಾನುವಾರ ಜೆರುಸಲೆಂ ಪೋಸ್ಟ್‌ ವರದಿ ಮಾಡಿದೆ.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು