ಸೋಮವಾರ, ಜೂನ್ 21, 2021
28 °C

ಜಾನ್ಸನ್‌ ಕಂಪೆನಿಯ ‘ಸ್ಪ್ರವಾಟೊ ಸ್ಪ್ರೆ’: ಆತ್ಮಹತ್ಯೆ ಆಲೋಚನೆಗೂ ಮದ್ದು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ನೀವು ಖಿನ್ನತೆಯಿಂದ ಬಳಲುತ್ತಿರುವಿರಾ? ಆತ್ಮಹತ್ಯೆ ಆಲೋಚನೆಗಳು ಬರುತ್ತಿವೆಯೇ? ಆಗಾದರೆ  ‘ಸ್ಪ್ರವಾಟೊ ಸ್ಪ್ರೆ’ ಬಳಸಿ ಕೆಟ್ಟ ಆಲೋಚನೆಗಳಿಂದ ದೂರವಾಗಿ ನೆಮ್ಮದಿಯ ಬದುಕು ಸಾಗಿಸಬಹುದು!

ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರು ಆತ್ಮಹತ್ಯೆಗೆ ಯತ್ನಿಸುವುದು ಸಹಜ. ಇಂತಹ ಸಂದರ್ಭದಲ್ಲಿ ‘ಸ್ಪ್ರವಾಟೊ ಸ್ಪ್ರೆ’ಬಳಸುವುದರಿಂದ ಪ್ರಾಣಾಪಾಯದಿಂದ ಪಾರಾಗಬಹುದು. ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪೆನಿಯ ‘ಸ್ಪ್ರವಾಟೊ ಸ್ಪ್ರೆ’ಯನ್ನು ಖಿನ್ನತೆಯ ಶಮನಕಾರಿಯಾಗಿ ಬಳಕೆ ಮಾಡಲು ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ.

ಅಮೆರಿಕದಲ್ಲಿ ಕೋವಿಡ್-19 ಪರಿಣಾಮದಿಂದ ಜನರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಆತ್ಮಹತ್ಯೆಯಂತಹ ಆಲೋಚನೆಗಳಿಂದ ದೂರ ಇರಲು ‘ಸ್ಪ್ರವಾಟೊ ಸ್ಪ್ರೆ’ ಹೆಚ್ಚು ಅನುಕೂಲವಾಗಲಿದೆ ಎಂದು ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿಯ ವಕ್ತಾರರು ಹೇಳಿದ್ದಾರೆ.

2019ರಲ್ಲಿ ‘ಸ್ಪ್ರವಾಟೊ ಸ್ಪ್ರೆ’ ಅನ್ನು ಕ್ಲಿಕಲ್‌ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಸುಮಾರು 6000 ಜನರ ಮೇಲೆ ಮಾಡಿದ ಪ್ರಯೋಗ ಯಶಸ್ವಿಯಾಗಿದೆ ಎಂದು ಕಂಪನಿ ತಿಳಿಸಿದೆ.

ಆತ್ಮಹತ್ಯೆ ಬಗ್ಗೆ ತೀವ್ರತರ ಆಲೋಚನೆ ಮಾಡಿದವರನ್ನು ಮೊದಲ ಹಂತದಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿತ್ತು.  ಇದನ್ನು ಬಳಕೆ ಮಾಡಿದವರು ಒಂದು ವಾರದ ಒಳಗೆ ಆತ್ಮಹತ್ಯೆ ಆಲೋಚನೆಯಿಂದ ಹಿಂದೆ ಸರಿದಿದ್ದಾರೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ ಕಂಪನಿಯ ವಕ್ತಾರರು ಹೇಳಿದ್ದಾರೆ.

‘ಸ್ಪ್ರವಾಟೊ ಸ್ಪ್ರೆ’ಗೆ ಬಳಕೆ ಮಾಡಿರುವ ರಾಸಾಯನಿಕ ಪದಾರ್ಥವು ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ, ಆತ್ಮಹತ್ಯೆ ಆಲೋಚನೆಯಿಂದ ಹಿಂದೆ ಸರಿಯುವಂತೆ ಮಾಡುತ್ತದೆ ಎಂದು ವೈದ್ಯರು ಹೇಳಿದ್ದಾರೆ, ತೀವ್ರವಾಗಿ ಖಿನ್ನತೆಯಿಂದ ಬಳಲುತ್ತಿರುವವರಿಗೆ ಮಾತ್ರ ಇದನ್ನು ಬಳಸಲು ಅವಕಾಶ ನೀಡಲಾಗಿದೆ.

ಮಾನಸಿಕ ಕೇಂದ್ರಗಳಲ್ಲಿನ ವೈದ್ಯರು ಮಾತ್ರ ‘ಸ್ಪ್ರವಾಟೊ ಸ್ಪ್ರೆ’ ಬಳಕೆ ಮಾಡಲು ಶಿಪಾರಸ್ಸು ಮಾಡಬಹುದು ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು