ಭಾನುವಾರ, ಆಗಸ್ಟ್ 1, 2021
27 °C

ಟೆಕ್ಸಾಸ್: ‘ಕೋವಿಡ್ ಪಾರ್ಟಿ’ಯಲ್ಲಿ ಭಾಗವಹಿಸಿದ್ದ ವ್ಯಕ್ತಿ ಸೋಂಕಿನಿಂದ ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Covid-19

ಆಸ್ಟಿನ್: ಕೊರೊನಾ ವೈರಸ್ ಎಂಬುದು ಹುಸಿ ಎಂದು ‘ಕೋವಿಡ್ ಪಾರ್ಟಿ’ಯಲ್ಲಿ ಭಾಗವಹಿಸಿದ 30 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಟೆಕ್ಸಾಸ್‌ನ ಆಸ್ಪತ್ರೆಯೊಂದು ತಿಳಿಸಿದೆ.

ಕೊರೊನಾ ವೈರಸ್‌ ಎಂಬುದು ನಿಜವೇ ಎಂದು ಪರಿಶೀಲಿಸಲು ಆ ವ್ಯಕ್ತಿ ಸೋಂಕಿತರ ಜತೆ ಕೂಟದಲ್ಲಿ ಭಾಗವಹಿಸಿದ್ದರು ಎಂದು ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಲ್ಲಿರುವ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಜಾನೆ ಆಪಲ್‌ಬಿ ತಿಳಿಸಿದ್ದಾರೆ.

‘ಕೋವಿಡ್ ಪಾರ್ಟಿ’ ಯಾವಾಗ ನಡೆದಿತ್ತು, ಎಷ್ಟು ಮಂದಿ ಭಾಗವಹಿಸಿದ್ದರು ಮತ್ತು ಎಷ್ಟು ಹೊತ್ತು ನಡೆದಿತ್ತು ಎಂಬುದನ್ನು ಅವರು ತಿಳಿಸಿಲ್ಲ. ಪಾರ್ಟಿಯಲ್ಲಿ ಭಾಗವಹಿಸಿದ ಬಳಿಕ ವ್ಯಕ್ತಿಗೆ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ವ್ಯಕ್ತಿಯ ಗುರುತು ಬಹಿರಂಗವಾಗಿಲ್ಲ. ವೈರಸ್ ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ ಎಂದು ಪರೀಕ್ಷಿಸಲು ಮತ್ತು ರೋಗನಿರೋಧಕ ಶಕ್ತಿ ಹೊಂದುವ ಪ್ರಯತ್ನವಾಗಿ ಜನರನ್ನು ಉದ್ದೇಶಪೂರ್ವಕ ವೈರಸ್‌ಗೆ ಒಡ್ಡಿಕೊಳ್ಳಲು ಇಂತಹ ಪಾರ್ಟಿಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 

ಮೃತಪಡುವುದಕ್ಕೂ ತುಸು ಮೊದಲು ಸೋಂಕಿತ ವ್ಯಕ್ತಿಯು ತಾನು ಕೋವಿಡ್ ಪಾರ್ಟಿಯಲ್ಲಿ ಭಾಗವಹಿಸಿದ್ದಾಗಿ ದಾದಿಯ ಬಳಿ ತಿಳಿಸಿದ್ದ ಎಂದು ಆಪಲ್‌ಬಿ ಹೇಳಿದ್ದಾರೆ. ‘ನಾನು ತಪ್ಪು ಮಾಡಿದೆ ಎಂದೆನಿಸುತ್ತಿದೆ. ಇದು (ಕೊರೊನಾ) ಹುಸಿ ಎಂದು ಭಾವಿಸಿದ್ದೆ. ಆದರೆ ಹಾಗಾಗಲಿಲ್ಲ’ ಎಂದು ಆತ ದಾದಿ ಬಳಿ ಹೇಳಿದ್ದಾಗಿ ಆಪಲ್‌ಬಿ ತಿಳಿಸಿದ್ದಾರೆ.

ಇತರರನ್ನು ಎಚ್ಚರಿಸುವ ಸಲುವಾಗಿ ಈ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ ಎಂದೂ ಅವರು ಹೇಳಿರುವುದಾಗಿ ನ್ಯೂಯಾರ್ಕ್‌ ಟೈಮ್ಸ್ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು