ವಾಷಿಂಗ್ಟನ್: ಗಾಲ್ವನ್ ಕಣಿವೆಯಲ್ಲಿ ಭಾರತದ ವಿರುದ್ಧ ಚೀನಾ ನಡೆಸಿದ ಆಕ್ರಮಣಕಾರಿ ನಡೆ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಆ ರಾಷ್ಟ್ರವು ವಿವಾದ ಸೃಷ್ಟಿಸಿರುವುದನ್ನು ಖಂಡಿಸಿ ಅಮೆರಿಕದ ಪ್ರಜಾಪ್ರತಿನಿಧಿ ಸಭೆಯು ರಾಷ್ಟ್ರೀಯ ಭದ್ರತಾ ದೃಢೀಕರಣ ಕಾಯ್ದೆಯ (ಎನ್‌ಡಿಎಎ) ತಿದ್ದುಪಡಿಯನ್ನು ಅವಿರೋಧವಾಗಿ ಅಂಗೀಕರಿಸಿದೆ.

ಸಂಸದ ಸ್ಟೀವ್ ಚಬೊಟ್ ಹಾಗೂ ಭಾರತ ಮೂಲದ ಅಮೆರಿಕ ಸಂಸದ ಅಮಿ ಬೆರ ಅವರು ಎನ್‌ಡಿಎಎಗೆ ಸೂಚಿಸಿರುವ ತಿದ್ದುಪಡಿಯನ್ನು ಸೋಮವಾರ ಅವಿರೋಧವಾಗಿ ಅಂಗೀಕರಿಸಲಾಗಿದ್ದು, ‘ವಾಸ್ತವ ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಎರಡೂ ರಾಷ್ಟ್ರಗಳು ಸೇನಾ ಜಮಾವಣೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಬೇಕು’ ಎಂದು ಒತ್ತಾಯಿಸಲಾಗಿದೆ.

ನೆರೆ ರಾಷ್ಟ್ರಗಳು ಮಾತ್ರವಲ್ಲ, ದಕ್ಷಿಣ ಚೀನಾ ಸಮುದ್ರ, ಸೆಂಕಾಕು ದ್ವೀಪದ ಮೇಲೆ ಒಡೆತನ ಸ್ಥಾಪಿಸಲು ಮುಂದಾಗುತ್ತಿರುವ ಚೀನಾದ ಕ್ರಮದ ವಿರುದ್ಧವೂ ಆತಂಕ ವ್ಯಕ್ತಪಡಿಸಲಾಗಿದೆ. ಕೊರೊನಾ ವೈರಸ್‌ನಿಂದ ಭಾರತವು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭವನ್ನು ಬಳಸಿಕೊಂಡು, ಭಾರತದ ಭೂಪ್ರದೇಶವನ್ನು ಕಬಳಿಸುವ ಪ್ರಯತ್ನ ಚೀನಾ ನಡೆಸಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.