ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಕುರಿತು ಆಕ್ಸ್‌ಫರ್ಡ್‌ ವಿವಿಯಿಂದ ಇಂದು ಒಳ್ಳೆ ಸುದ್ದಿ?

Last Updated 16 ಜುಲೈ 2020, 3:38 IST
ಅಕ್ಷರ ಗಾತ್ರ

ಲಂಡನ್‌: ‌ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯವು ಕೊರೊನಾ ವೈರಸ್‌ಗೆ ತಾನು ಸಿದ್ಧಪಡಿಸುತ್ತಿರುವ ಸಂಭಾವ್ಯ ಲಸಿಕೆಯ ಆರಂಭಿಕ ಪ್ರಯೋಗಗಳ ಕುರಿತ ಸಕಾರಾತ್ಮಕ ಸಂಗತಿಯೊಂದನ್ನು ಗುರುವಾರ ಬಹಿರಂಗಪಡಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬ್ರಿಟನ್‌ನ ‘ಐಟಿವಿ’ ವಾಹಿನಿಯ ರಾಜಕೀಯ ವಿಭಾಗದ ಸಂಪಾದಕ ರಾಬರ್ಟ್‌ ಪೆಟ್ಸೋನ್, ‘ಲಿಸಿಕೆ ಕುರಿತು ಒಳ್ಳೆ ಸುದ್ದಿಯೊಂದುಹೊರಬೀಳಲಿದೆ ಎಂದು ಬರೆದುಕೊಂಡಿದ್ದಾರೆ. ಅವರ ಬರಹ ಉಲ್ಲೇಖಿಸಿ ರಾಯಿಟರ್ಸ್‌ ಸುದ್ದಿ ಸಂಸ್ಥೆ ಈ ವಿಷಯವನ್ನುವರದಿ ಮಾಡಿದೆ.

18 ವರ್ಷಕ್ಕಿಂತ ಮೇಲ್ಪಟ್ಟವರ ಜನರಲ್ಲಿ ಈ ಲಸಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಣಯಿಸಲು ವಿಶ್ವವಿದ್ಯಾಲಯವು ಲಸಿಕೆಯ ಮೂರನೇ ಹಂತದ ಹ್ಯೂಮನ್‌ ಟ್ರಯಲ್‌ (ಮಾನವರ ಮೇಲಿನ ಪ್ರಯೋಗ) ಪ್ರಾರಂಭಿಸಿದೆ. ಆದರೆ ಈ ಲಸಿಕೆಯ ಒಂದನೇ ಹಂತದ ಪ್ರಯೋಗದ ಫಲಿತಾಂಶಗಳು ಇನ್ನೂ ಬಹಿರಂಗವಾಗಿಲ್ಲ.

‘ಈ ವರೆಗಿನ ಪ್ರಯೋಗಗಳಲ್ಲಿ ನಾವು ಕಂಡಿರುವ ಪ್ರತಿರೋಧಕ ಪ್ರತಿಕ್ರಿಯೆಯು ಲಸಿಕೆ ತಯಾರಿಸುವ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹದಾಯಕವಾಗಿದೆ,’ ಎಂದು ಈ ತಿಂಗಳ ಆರಂಭದಲ್ಲಿ ವಿಜ್ಞಾನಿಗಳ ತಂಡ ಹೇಳಿಕೊಂಡಿತ್ತು.

‘ಆಸ್ಟ್ರಾಜೆನೆಕಾ ಔಷಧ ಸಂಸ್ಥೆ ತಯಾರಿಸುತ್ತಿರುವ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸಂಶೋಧಿಸುತ್ತಿರುವ ಕೋವಿಡ್ -19 ಲಸಿಕೆಯ ಆರಂಭಿಕ ಪ್ರಯೋಗಗಳ ಕುರಿತು ಶೀಘ್ರದಲ್ಲೇ (ಬಹುಶಃ ನಾಳೆ) ಸಕಾರಾತ್ಮಕ ಸುದ್ದಿ ಬರಲಿದೆ ಎಂದು ನನಗೆ ಕೇಳಿಬಂದಿದೆ’ ಎಂದು ಪೆಸ್ಟನ್ ಬುಧವಾರ ತಮ್ಮ ಬ್ಲಾಗ್‌ನಲ್ಲಿಪ್ರಕಟಿಸಿದ್ದಾರೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯವು ತಾನು ಸಂಶೋಧಿಸುತ್ತಿರುವ ಲಸಿಕೆಯನ್ನು ತಯಾರಿಸಲು ಅಸ್ಟ್ರಾಜೆನೆಕಾ ಎಂಬ ಔಷಧ ಸಂಸ್ಥೆಗೆ ಪರವಾನಗಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT