ಶುಕ್ರವಾರ, ಆಗಸ್ಟ್ 7, 2020
23 °C
ಚೀನಾದಿಂದ ಗಡಿ ಉದ್ವಿಗ್ನತೆ

ಗಡಿ ಸಂಘರ್ಷ: ಭಾರತದಿಂದ ಸಮರ್ಥ ನಿರ್ವಹಣೆ- ಅಮೆರಿಕ ಸಂಸದ ಶ್ಲಾಘನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಗಡಿಯಲ್ಲಿ ಚೀನಾ ನಿರ್ಮಿಸಿದ್ದ ಉದ್ವಿಗ್ನ ಸ್ಥಿತಿಯನ್ನು ಭಾರತ ಸಮರ್ಥವಾಗಿ ಎದುರಿಸಿದೆ. ಇದು ಚೀನಾದಿಂದ ಒದಗುವ ಬೆದರಿಕೆಯನ್ನು ಧೈರ್ಯದಿಂದ ಎದುರಿಸಲು ಇತರ ದೇಶಗಳಿಗೆ ಶಕ್ತಿ ತುಂಬಲಿದೆ ಎಂದು ಅಮೆರಿಕದ ಸಂಸದ ಜಾನ್‌ ಕೆನಡಿ ಹೇಳಿದ್ದಾರೆ.

‘ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹೆಮ್ಮೆ ಎನಿಸುತ್ತದೆ. ಕೆನಡಾ ನಡೆಯ ಬಗ್ಗೆಯೂ ಹೆಮ್ಮೆ ಎನಿಸುತ್ತದೆ. ಈಗ ಯಾವ ದೇಶವೂ ಅಂಜಿಕೊಂಡು, ಅವಿತುಕೊಳ್ಳದೇ ಸಮರ್ಥ ಉತ್ತರ ನೀಡುತ್ತಿವೆ’ ಎಂದು ರಿ‍ಪಬ್ಲಿಕನ್‌ ಸಂಸದ ಕೆನಡಿ ಅವರು ಫಾಕ್ಸ್‌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು ಎಂಬ ಅಂಶವನ್ನು ಅಮೆರಿಕ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯ ಚೀನಾದ ಕಮ್ಯುನಿಸ್ಟ್‌ ಪಾರ್ಟಿಗೆ ಮನದಟ್ಟು ಮಾಡಬೇಕಾಗಿದೆ’ ಎಂದೂ ಅವರು ಪ್ರತಿಪಾದಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು