ಭಾನುವಾರ, ಆಗಸ್ಟ್ 1, 2021
27 °C
ಟೊರೊಂಟೊ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನ

ರೋಗ ನಿರೋಧಕ ಶಕ್ತಿ ಕುಂದಿಸುವುದನ್ನು ನಿಯಂತ್ರಿಸಲು ಔಷಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೊರೊಂಟೊ: ಕೋವಿಡ್‌–19 ಸೇರಿದಂತೆ ಉಸಿರಾಟದ ತೊಂದರೆಗೆ ಸಿಲುಕುವವರ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದನ್ನು ನಿಯಂತ್ರಿಸಲು ವಿಜ್ಞಾನಿಗಳು ಹೊಸ ಔಷಧ ಕಂಡು ಹಿಡಿದಿದ್ದಾರೆ.

ಎರಡು ಪ್ರೊಟಿನ್‌ಗಳು ಸೇರಿ ಕೋಶಗಳ ಒಳಚರ್ಮದ ಮೇಲೆ ದಾಳಿ ಮಾಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಕುಂದಿಸುವ ಪ್ರಯತ್ನದಲ್ಲಿ ತೊಡಗುತ್ತವೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಔಷಧವು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಟೊರೊಂಟೊ ವಿಶ್ವವಿದ್ಯಾಲಯದ ಸಂಶೋಧಕರು ವಿವರಿಸಿದ್ದಾರೆ.

ಇನ್‌ಫ್ಲುಯೆಂಜಾ, ಎಚ್‌1ಎನ್‌1 ಅಥವಾ ಕೋವಿಡ್‌–19 ಸೋಂಕಿಗೆ ಒಳಗಾದಾಗ ಸಹಜವಾಗಿಯೇ ರೋಗ ನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ಕೈಗೊಂಡಿರುವ ಅಧ್ಯಯನದ ಸಂದರ್ಭದಲ್ಲೂ ಶೇಕಡ 43ರಷ್ಟು ಪ್ರೊಟಿನ್‌ ಅಂಶವನ್ನು ಕಡಿಮೆ ಮಾಡುತ್ತಿರುವುದು ತಿಳಿದು ಬಂದಿದೆ ಎಂದು ವಿವರಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು