ಭಾನುವಾರ, ಆಗಸ್ಟ್ 9, 2020
21 °C

ಸಮರಾಭ್ಯಾಸದ ಮೂಲಕ ತೈವಾನ್‌ ಶಕ್ತಿ ಪ್ರದರ್ಶನ: ಚೀನಾಗೆ ಎಚ್ಚರಿಕೆ ಸಂದೇಶ

ಎಪಿ Updated:

ಅಕ್ಷರ ಗಾತ್ರ : | |

Prajavani

ತೈಚುಂಗ್‌(ತೈವಾನ್): ಚೀನಾ ಮತ್ತು ತೈವಾನ್‌ ನಡುವಿನ ಪರಿಸ್ಥಿತಿ ದಿನೇ ದಿನೇ ಮತ್ತಷ್ಟು ಬಿಗಡಾಯಿಸುತ್ತಿದೆ. ಈ ನಡುವೆ ತೈವಾನ್‌ ಸಮರಾಭ್ಯಾಸದ ಮೂಲಕ ಗುರುವಾರ ತನ್ನ ಶಕ್ತಿ ಪ್ರದರ್ಶಿಸಿದೆ.

ಚೀನಾದತ್ತ ಮುಖ ಮಾಡಿರುವ ತೈಚುಂಗ್‌ನ ದ್ವೀಪವೊಂದರ ಕಡಲ ತೀರದ ಬಳಿ ತೈವಾನ್‌ ಸೇನೆಯು ಸಮರಾಭ್ಯಾಸ ನಡೆಸಿದ್ದು, ಈ ವೇಳೆ ಯುದ್ಧ ವಿಮಾನಗಳು ಸಮುದ್ರಕ್ಕೆ ಗುಂಡು ಮತ್ತು ಬಾಂಬ್‌ ಹಾರಿಸಿದವು. ಅಲ್ಲದೇ ಹೆಲಿಕಾಫ್ಟರ್‌ ಮೂಲಕ ನೀರಿಗೆ ಕ್ಷಿಪಣಿ ಉಡಾಯಿಸಲಾಯಿತು. ಈ ಮೂಲಕ ತೈವಾನ್‌ ಸೇನೆಯು ತನ್ನ ಸೇನಾ ಬಲವನ್ನು ಪ್ರದರ್ಶಿಸಿದೆ.

‘ನಾವು ನಮ್ಮ ದೇಶವನ್ನು ರಕ್ಷಿಸುವಲ್ಲಿ ಸಮರ್ಥರಾಗಿದ್ದೇವೆ ಎಂಬುದನ್ನು ಜಗತ್ತಿಗೆ ತಿಳಿಯಪಡಿಸುವುದು ಇದರ ಪ್ರಮುಖ ಗುರಿಯಾಗಿದೆ ಎಂದು ತೈವಾನ್‌ ಅಧ್ಯಕ್ಷ ತ್ಸೈ ಇಂಗ್-ವೆನ್ ತಿಳಿಸಿದರು.

ಐದು ದಿನಗಳ ಈ ಸಮರಾಭ್ಯಾಸ ಶುಕ್ರವಾರ ಕೊನೆಗೊಳ್ಳಲಿದೆ. ತೈವಾನ್‌ ಅನ್ನು ಚೀನಾ ತನ್ನ ಭೂಪ್ರದೇಶದ ಭಾಗ ಎಂದು ಪ್ರತಿಪಾದಿಸುತ್ತಿದೆ. ಆದರೆ 160 ಕಿ.ಮೀ. ಭೂಪ್ರದೇಶವನ್ನು ಹೊಂದಿರುವ ತೈವಾನ್‌  ತನ್ನದೇ ಆದ ಸರ್ಕಾರವನ್ನು ಹೊಂದಿದ್ದು, 2.40 ಕೋಟಿ ಜನರು ಇಲ್ಲಿ ವಾಸಿಸುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು