ಬುಧವಾರ, ಆಗಸ್ಟ್ 12, 2020
24 °C

ಅಯೋಧ್ಯೆ: ಶಿಲಾನ್ಯಾಸದ ದಿನ ಅಮೆರಿಕದಲ್ಲಿ ‘ವರ್ಚುವಲ್ ಪೂಜೆ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಆಗಸ್ಟ್‌ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವನ್ನು ಸಂಭ್ರಮಿಸುವುದಕ್ಕಾಗಿ ಅದೇ ದಿನ ಉತ್ತರ ಅಮೆರಿಕದ ಹಿಂದೂ ದೇವಾಲಯಗಳಲ್ಲಿ ವರ್ಚುವಲ್‌ ಪೂಜೆ ಮತ್ತು ಪ್ರಾರ್ಥನೆಯನ್ನು ಆಯೋಜಿಸಲಾಗಿದೆ ಎಂದು ಉತ್ತರ ಅಮೆರಿಕದ ಹಿಂದೂ ಮಂದಿರ ಕಾರ್ಯಕಾರಿಣಿ ಸಮಿತಿ ಮತ್ತು ಹಿಂದೂ ಮಂದಿರ ಅರ್ಚಕರ ಸಮಿತಿ ತಿಳಿಸಿವೆ.‌

‘ಈ ಐತಿಹಾಸಿಕ ಕಾರ್ಯಕ್ರಮದ ಮೂಲ ಹೊಸ ಯುಗವೊಂದು ಆರಂಭವಾಗುವಂತೆ ಭಾಸವಾಗುತ್ತಿದೆ. ಈ ದಿನವನ್ನು ನಾವು ಹಬ್ಬದ ರೀತಿಯಲ್ಲಿ ಆಚರಿಸುತ್ತೇವೆ‘ ಎಂದು ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲಿರುವ ಶಿವ ದುರ್ಗಾ ದೇವಾಲಯದ ಸಂಸ್ಥಾಪಕ ಅಧ್ಯಕ್ಷ ಮತ್ತು ಆಚಾರ್ಯ ಪಂಡಿತ್ ಕೃಷ್ಣ ಕುಮಾರ್ ಪಾಂಡೆ ಹೇಳಿದ್ದಾರೆ.

‘ಶಿಲಾನ್ಯಾಸದ ದಿನದಂದು ಉತ್ತರ ಅಮೆರಿಕದಲ್ಲಿ ಹಿಂದೂ ಅರ್ಚಕರಿಂದ ಸಾಮೂಹಿಕ ಮಂತ್ರಪಠಣ ನಡೆಯಲಿದೆ. ಜತೆಗೆ ಹಿನ್ನೆಲೆ ಗಾಯಕರಾದ ಅನುಪ್ ಜಲೊಟ ಮತ್ತು ಸಂಜೀವಿನಿ ಬೆಲಂಡೆ ಅವರಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ‘ ಎಂದು ‌ಅಮೆರಿಕದ ವಿಶ್ವ ಹಿಂದೂ ಪರಿಷತ್ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು