ಸೋಮವಾರ, ಜುಲೈ 26, 2021
21 °C

ಯುಎಸ್‌ ಏಡ್‌ಗೆ ಭಾರತೀಯ ಮಹಿಳೆ ನೇತೃತ್ವ?

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಂತರರಾಷ್ಟ್ರೀಯ ಅಭಿವೃದ್ಧಿಗಾಗಿ ಅಮೆರಿಕದ ಏಜನ್ಸಿಯ (ಯುಎಸ್‌ ಏಡ್‌) ಏಷ್ಯಾ ಬ್ಯೂರೊ ಮುಖ್ಯಸ್ಥರಾಗಿ ಭಾರತ ಮೂಲದ ಅಮೆರಿಕನ್‌ ವಕೀಲರೊಬ್ಬರನ್ನು ನೇಮಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚಿಂತಿಸುತ್ತಿದ್ದಾರೆ ಎಂದು ಶ್ವೇತಭವನ ಮೂಲಗಳು ತಿಳಿಸಿವೆ.

ಇದು ನಿಜವಾದರೆ ಮೆರಿಲ್ಯಾಂಡ್‌ ನಿವಾಸಿ ಸುಘೋಷ್‌ ಸ್ಟ್ರಿಕ್ಲೆಟ್‌ ಅವರು ಯುಎಸ್‌ ಎಡ್‌ನ ಏಷ್ಯಾ ಬ್ಯೂರೊದ ಸಹಾಯಕ ಆಡಳಿತಗಾರರಾಗಿ ನೇಮಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸುಘೋಷ್‌ ಅವರು ರಾಷ್ಟ್ರೀಯ ಭದ್ರತೆ ಕಾನೂನು ಹಾಗೂ ವಿದೇಶಾಂಗ ವ್ಯವಹಾರಗಳನ್ನು ಕುರಿತು 25 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು