ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಕೋಟಿ ಅಮೆರಿಕನ್ನರು ಕೊರೊನಾ ಸೋಂಕಿಗೆ ಒಳಗಾಗಿರುವ ಸಾಧ್ಯತೆ

ರಕ್ತದ ಮಾದರಿಗಳು ಹಾಗೂ ಇತರ ಮೂಲಗಳ ಆಧಾರದ ಮೇಲೆ ಅಂದಾಜು
Last Updated 26 ಜೂನ್ 2020, 7:01 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ ಇದುವರೆಗೆ 2 ಕೋಟಿಗೂ ಹೆಚ್ಚು ನಾಗರಿಕರು ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಅಂದಾಜಿಸಿದ್ದಾರೆ.

ಇದರಿಂದಾಗಿ ಅಮೆರಿಕದ ಬಹುಪಾಲು ಜನಸಂಖ್ಯೆ ಸೋಂಕಿಗೆ ಒಳಗಾಗಬಹುದು ಎಂದು ವಿಶ್ಲೇಷಿಸಲಾಗಿದೆ. 2 ಕೋಟಿ ಸೋಂಕಿತರು ಅಂದರೆ ದೇಶದ 33.1 ಕೋಟಿ ಜನಸಂಖ್ಯೆಯಲ್ಲಿ ಶೇಕಡ 6ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ದೇಶದಾದ್ಯಂತ ಸಂಗ್ರಹಿಸಿರುವ ರಕ್ತದ ಮಾದರಿಗಳು ಹಾಗೂ ಇತರ ಮೂಲಗಳ ಆಧಾರದ ಮೇಲೆ ‘ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ’ದ (ಸಿಡಿಸಿ) ಅಧಿಕಾರಿಗಳು ಈ ಅಂದಾಜು ಮಾಡಿದ್ದಾರೆ.

ಗುರುವಾರದವರೆಗೆ 23 ಲಕ್ಷ ಜನರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು.ಅದರಲ್ಲೂ ಸುಮಾರು 12 ರಾಜ್ಯಗಳಲ್ಲಿ ವ್ಯಾಪಕವಾಗಿ ಸೋಂಕು ಹಬ್ಬುತ್ತಿರುವುದು ಆತಂಕ ಮೂಡಿಸಿದೆ.

ಪರೀಕ್ಷೆಗಳು ವ್ಯಾಪಕವಾಗಿ ನಡೆಯದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರ ಪತ್ತೆಯಾಗಿಲ್ಲ. ಸಮರ್ಪಕವಾಗಿ ಪರೀಕ್ಷೆಗಳು ನಡೆದರೆ ಲಕ್ಷಾಂತರ ಮಂದಿ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಅಮೆರಿಕದಲ್ಲಿ ಇನ್ನೂ ಹಲವರು ಸೊಂಕಿಗೆ ಒಳಗಾಗಿರಬಹುದು ಅಥವಾ ಒಳಗಾಗುವ ಸಾಧ್ಯತೆ ಇದೆ. ಪತ್ತೆಯಾಗುವ ಪ್ರತಿಯೊಂದು ಪ್ರಕರಣದ ಜತೆಯಲ್ಲೇ ಮತ್ತೆ 10 ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ’ ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ (ಸಿಡಿಸಿ) ನಿರ್ದೇಶಕ ಡಾ. ರಾಬರ್ಟ್‌ ರೆಡ್‌ಫೀಲ್ಡ್‌ ತಿಳಿಸಿದ್ದಾರೆ.

‘ಇದೊಂದು ಗಂಭೀರ ಪರಿಸ್ಥಿತಿ. ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಿಗೆ ಹೋಲಿಸಿದರೆ ಈಗ ಪರಿಸ್ಥಿತಿ ವಿಭಿನ್ನವಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗುತ್ತಿದ್ದಾರೆ’ ಎಂದು ವೈರಾಣು ತಜ್ಞ ರೆಡ್‌ಫೀಲ್ಡ್‌ ಎಚ್ಚರಿಕೆ ನೀಡಿದ್ದಾರೆ.

‘ಸೋಂಕಿಗೆ ಹಲವು ಮಂದಿ ಒಳಗಾಗುವ ಸಾಧ್ಯತೆ ಇದೆ. ಇದು ಮಾರಕ ಕಾಯಿಲೆ. ಹೀಗಾಗಿ, ಎಚ್ಚರವಹಿಸಬೇಕಾಗಿದೆ’ ಎಂದು ಜಾನ್ಸ್ ಹಾಪ್‌ಕಿನ್ಸ್‌ ಬ್ಲೂಮಬರ್ಗ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ಉಪ ಡೀನ್‌ ಡಾ. ಜೊಶೌ ಶರ್ಫಸ್ಟೀನ್‌ ಹೇಳಿದ್ದಾರೆ.

ಸೋಂಕಿಗೆ ಒಳಗಾದ ಶೇಕಡ 25ರಷ್ಟು ಮಂದಿಯಲ್ಲಿ ರೋಗದ ಯಾವುದೇ ಲಕ್ಷಣಗಳಿರಲಿಲ್ಲ ಎಂದು ಸಿಡಿಸಿ ಅಧಿಕಾರಿಗಳು ಮತ್ತು ಅಮೆರಿಕದ ಸೋಂಕು ನಿವಾರಣೆಯ ತಜ್ಞ ಡಾ. ಅಂಟೋನಿ ಫೌಸಿ ಈ ಮೊದಲು ಹೇಳಿದ್ದರು.

ಪ್ರಸ್ತುತ ಸೃಷ್ಟಿಯಾಗಿರುವ ಆರೋಗ್ಯ ಬಿಕ್ಕಟ್ಟಿಗೆ ಪರಿಹಾರ ರೂಪಿಸಿ ಜನರ ಆರೋಗ್ಯ ಕಾಪಾಡಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಏಪ್ರಿಲ್‌ ತಿಂಗಳಲ್ಲೂ ಇದೇ ರೀತಿ ಸೋಂಕಿತರ ಪ್ರಮಾಣ ಹೆಚ್ಚಿತ್ತು. ಆಗ ಪರೀಕ್ಷೆ ನಡೆಸಲು ಮೂಲಸೌಕರ್ಯಗಳ ಕೊರತೆಯೂ ಇತ್ತು’ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವೈರಸ್‌ ಕ್ರಮೇಣ ನಾಶವಾಗುತ್ತಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿಯೂ ಅವರು ಮಾಸ್ಕ್ ಧರಿಸಲು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT