ನ.1ರಿಂದ 25ರವರೆಗೆ ₹31,630 ಕೋಟಿ ಹೂಡಿಕೆ ಮಾಡಿದ ವಿದೇಶಿ ಬಂಡವಾಳ ಹೂಡಿಕೆದಾರರು
ನವದೆಹಲಿ (ಪಿಟಿಐ): ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ನವೆಂಬರ್ 1ರಿಂದ 25ರವರೆಗೆ ದೇಶದ ಬಂಡವಾಳ ಮಾರುಕಟ್ಟೆಗಳ ಮೂಲಕ ₹ 31,630 ಕೋಟಿ ಹೂಡಿಕೆ ಮಾಡಿದ್ದಾರೆ.
ಬಡ್ಡಿ ದರವನ್ನು ಹೆಚ್ಚಿನ ಪ್ರಮಾಣದಲ್ಲಿ ಜಾಸ್ತಿ ಮಾಡುವ ಪ್ರಕ್ರಿಯೆಗೆ ತಡೆ ಬೀಳುವ ನಿರೀಕ್ಷೆ ಮತ್ತು ಆರ್ಥಿಕ ಚಟುವಟಿಕೆಗಳ ಕುರಿತು ಸಕಾರಾತ್ಮಕ ಭಾವನೆಯಿಂದಾಗಿ ಇಷ್ಟು ಮೊತ್ತ ಹೂಡಿಕೆ ಮಾಡಿದ್ದಾರೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.Last Updated 27 ನವೆಂಬರ್ 2022, 18:08 IST