ಹಾಸಣಗಿ ಭಟ್ಟರ ಕಾಯಂ ಗ್ರಾಮ ವಾಸ್ತವ್ಯ
ಹಾಸಣಗಿ ಗಣಪತಿ ಭಟ್ಟರು ಅಂತರರಾಷ್ಟ್ರೀಯ ಮಟ್ಟದ ಹಿಂದೂಸ್ತಾನಿ ಸಂಗೀತ ಕಲಾವಿದರು. ದೇಶ, ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಾರೆ. ಪುಣೆಗೆ ಹೋಗ್ತಾರೆ. ಮುಂಬೈಗೆ ಹೋಗ್ತಾರೆ. ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೊ, ಚಿಕಾಗೊ, ಬೋಸ್ಟನ್, ವಾಷಿಂಗ್ಟನ್ ಹೀಗೆ ಎಲ್ಲ ಕಡೆ ಕಾರ್ಯಕ್ರಮ ನೀಡುತ್ತಾರೆ. ಹಾಗಂತ ಅವರು ಯಾವ ದೊಡ್ಡ ನಗರದಲ್ಲಿ ಕಾಯಂ ಉಳಿಯುವುದಿಲ್ಲ. ಕಾರ್ಯಕ್ರಮ ಮುಗಿಸಿ ತಮ್ಮ ಗ್ರಾಮ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಹಾಸಣಗಿಗೆ ವಾಪಸು ಬರುತ್ತಾರೆ. ಅದೇ ಅವರ ಕರ್ಮಭೂಮಿ. ಅಲ್ಲಿ ಸಂಗೀತ ಬಿತ್ತುತ್ತಾರೆ. ಸಂಗೀತವನ್ನೇ ಬೆಳೆಯುತ್ತಾರೆ. ಅವರದ್ದು ಕಾಯಂ ಗ್ರಾಮ ವಾಸ್ತವ್ಯ.Last Updated 6 ಜುಲೈ 2019, 19:30 IST