ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Yuva Manasu Hosa Kanasu

ADVERTISEMENT

ಯುವ ಮನಸು; ಹೊಸ ಕನಸು| ಸಣ್ಣ ಕಥೆಗಳನ್ನು ಬರೆಯುವಾಸೆ

ಈ ವರ್ಷದ ಆಗಸ್ಟ್‌ನಲ್ಲಿ ಪ್ರಕಟಗೊಂಡಿದ್ದ ನನ್ನ ಮೊದಲ ಕಾದಂಬರಿ ‘ಹಾಣಾದಿ’ ಓದುಗರಿಂದ, ವಿಮರ್ಶಕರಿಂದ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಹೊಸ ವರ್ಷದ ಮೊದಲ ಹೆಜ್ಜೆಯಲ್ಲಿ ಎರಡನೇ ಮುದ್ರಣಕ್ಕೆ ‘ಹಾಣಾದಿ’ಯನ್ನು ಇನ್ನೊಂದಿಷ್ಟು ತಿದ್ದಿ-ತೀಡಿ ಪ್ರಕಟಿಸಬೇಕಿದೆ. ನನಗೆ ಮೊದಲಿನಿಂದಲೂ ಕಾದಂಬರಿಗಳ ಬಗ್ಗೆ ವಿಶೇಷ ಆಸಕ್ತಿ. ಲೈಬ್ರರಿಯ ಕಪಾಟುಗಳಲ್ಲಿ, ಹಳೆ ಪುಸ್ತಕದ ಅಂಗಡಿಗಳ ಗುಂಪುಗಳಲ್ಲಿ ನಾನು ಯಾವಾಗಲೂ ಹುಡುಕುವುದು ಇವುಗಳನ್ನೆ.
Last Updated 28 ಡಿಸೆಂಬರ್ 2019, 19:30 IST
ಯುವ ಮನಸು; ಹೊಸ ಕನಸು|  ಸಣ್ಣ ಕಥೆಗಳನ್ನು ಬರೆಯುವಾಸೆ

ಯುವ ಮನಸು; ಹೊಸ ಕನಸು| ವಾದ್ಯ ಭಂಡಾರ ತೆರೆಯುವ ಸಂಕಲ್ಪ

ಗುರುಹಿರಿಯರ ಆಶೀರ್ವಾದದಿಂದ ಸಿತಾರ್‌, ಸೂರ್‌ಬಹರ್‌, ತಾರ್‌ ಶೆಹನಾಯಿ, ಇಸರಾಜ್, ದಿಲ್‌ರುಬಾ ಪಂಚವಾದ್ಯ ನುಡಿಸುವ ವಿರಳಾತಿ ವಿರಳ ಕಲಾವಿದ ಎನಿಸಿಕೊಂಡಿದ್ದು ನನ್ನ ಪುಣ್ಯ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ನನ್ನ ಸಂಕಲ್ಪ. ಸಂಗೀತ ವಾದ್ಯಗಳ ವೈಜ್ಞಾನಿಕ ಅಧ್ಯಯನಕ್ಕಾಗಿ ರಾಷ್ಟ್ರೀಯ ಫೆಲೋಶಿಪ್‌ ದೊರೆತಿದ್ದು 2020ರಲ್ಲಿ ಹೊಸ ಹುಡುಕಾಟದತ್ತ ಹೆಜ್ಜೆ ಇಡುತ್ತಿದ್ದೇನೆ. ಕಮಾನು (ಬೋವಿಂಗ್‌) ವಾದ್ಯಗಳ ನುಡಿಸಾಣಿಕೆ ಹಾದಿಯಲ್ಲಿ ಒಮ್ಮೆಲೇ ತೂರಿಬರುವ ಅಪಸ್ವರ (ವಾಲ್ಫ್‌ ನೋಟ್ಸ್‌) ನಿವಾರಿಸುವ ಸವಾಲು ನನ್ನೆದುರಿಗಿದೆ.
Last Updated 28 ಡಿಸೆಂಬರ್ 2019, 19:30 IST
ಯುವ ಮನಸು; ಹೊಸ ಕನಸು| ವಾದ್ಯ ಭಂಡಾರ ತೆರೆಯುವ ಸಂಕಲ್ಪ

ಯುವ ಮನಸು; ಹೊಸ ಕನಸು| ಸಂಕಟಗಳ ಜತೆಗೆ ಗುದ್ದಾಡಬೇಕು...

ಹೊಸ ವರ್ಷ ಹರುಷಗಳನ್ನೇ ಹೊತ್ತು ತರಲೆಂಬ ಕನಸು ಎಲ್ಲರಲ್ಲೂ ಅಂತಸ್ಥವಾಗಿರುವುದು ಸಹಜ. ಕಾರಣ ಹಳೆ ವರ್ಷದ ಸೋಲು, ನಿರಾಶೆ, ಹತಾಶೆಗಳನ್ನು ಮೂಟೆಕಟ್ಟಿ ಅಟ್ಟಕ್ಕೊ, ಗುಜರಿಗೋ, ಗೋಡಾಣಕ್ಕೊ ಎಸೆಯುವ ಕಾತರವನ್ನು ಹೊಸ ವರ್ಷದ ಹುಮ್ಮಸ್ಸು ತಂದೊಡ್ಡುತ್ತದೆ.
Last Updated 28 ಡಿಸೆಂಬರ್ 2019, 19:30 IST
ಯುವ ಮನಸು; ಹೊಸ ಕನಸು| ಸಂಕಟಗಳ ಜತೆಗೆ ಗುದ್ದಾಡಬೇಕು...

ಸೊಪ್ಪು, ತರಕಾರಿ ನೇರವಾಗಿ ಗ್ರಾಹಕನಿಗೆ ಸಿಗಬೇಕು: ರೇಖಾ

ಕಳೆದ ಆರೆಂಟು ವರ್ಷಗಳ ಅವಧಿಯಲ್ಲಿ ವಾತಾವರಣದಲ್ಲಿ ಏರುಪೇರು ಆಗುತ್ತಿದೆ. ಇದರ ನೇರ ಪರಿಣಾಮ ವ್ಯವಸಾಯದ ಮೇಲೆ ಆಗುತ್ತಿದೆ. ವಿಪರ್ಯಾಸದ ಸಂಗತಿ ಅಂದರೆ, ಇಂತಹ ಬದಲಾವಣೆಯಿಂದ ರೈತ ಸಂಕಷ್ಟಕ್ಕೆ ಸಿಲುಕುತ್ತ ಇದ್ದರೂ ಜನಸಾಮಾನ್ಯರು ಹೆಚ್ಚೇನೂ ಸ್ಪಂದಿಸುತ್ತಿಲ್ಲ. ಹಾಗಿದ್ದರೂ ರೈತರು ಕಷ್ಟವೋ, ನಷ್ಟವೋ ನೆಲವನ್ನೇ ಅವಲಂಬಿಸಿ ಹಗಲಿರುಳು ದುಡಿಯುತ್ತಿದ್ದಾರೆ.
Last Updated 28 ಡಿಸೆಂಬರ್ 2019, 19:30 IST
ಸೊಪ್ಪು, ತರಕಾರಿ ನೇರವಾಗಿ ಗ್ರಾಹಕನಿಗೆ ಸಿಗಬೇಕು: ರೇಖಾ

ಯುವ ಮನಸು; ಹೊಸ ಕನಸು| ಹೆಚ್ಚು ಕೆಲಸವೇ ನನ್ನ ಅಜೆಂಡಾ: ನೀನಾಸಂ ಸತೀಶ್‌

ಈ ವರ್ಷ ನನ್ನ ಪಾಲಿಗೆ ಅತ್ಯಂತ ವಿಶೇಷ ಮತ್ತು ಸ್ಮರಣೀಯವಾಗಿತ್ತು. ನನ್ನನ್ನು ತುಂಬಾ ಖುಷಿಯಾಗಿಟ್ಟಿತ್ತು. ‘ಚಂಬಲ್‌’, ‘ಅಯೋಗ್ಯ’, ‘ಬ್ರಹ್ಮಚಾರಿ’ ಸಿನಿಮಾಗಳು ಒಳ್ಳೆಯ ಹೆಸರು ತಂದುಕೊಟ್ಟವು. ‘ಅಯೋಗ್ಯ’ ಸಿನಿಮಾ ಪ್ರಶಸ್ತಿಯನ್ನು ತಂದುಕೊಟ್ಟಿತು. ಇಷ್ಟು ದಿನ ಎಲ್ಲ ರೀತಿಯ ಪ್ರಯೋಗಗಳನ್ನು ನಡೆಸಿಕೊಂಡು ಬಂದಿದ್ದು, ಈಗ ‘ಗೋಧ್ರಾ’ ಚಿತ್ರದ ಮೂಲಕ ಮುಂದಿನ ಹಂತಕ್ಕೆ ಕಾಲಿಡುತ್ತಿದ್ದೇನೆ.
Last Updated 28 ಡಿಸೆಂಬರ್ 2019, 19:30 IST
ಯುವ ಮನಸು; ಹೊಸ ಕನಸು| ಹೆಚ್ಚು ಕೆಲಸವೇ ನನ್ನ ಅಜೆಂಡಾ: ನೀನಾಸಂ ಸತೀಶ್‌

ಯುವ ಮನಸು; ಹೊಸ ಕನಸು| ದೇಶದ ಭಾವೈಕ್ಯ ಕಾಯಬೇಕು: ಸೌಮ್ಯಾ ರೆಡ್ಡಿ

ಹೊಸ ವರ್ಷಕ್ಕೆ ಸಂಬಂಧಿಸಿದಂತೆ ನಿರ್ಣಯಗಳು ಅಂತ ಏನೂ ಇರುವುದಿಲ್ಲ. ಆದರೆ, ಕೆಲವು ನಿರ್ದಿಷ್ಟ ಕೆಲಸಗಳನ್ನು ಮುಂದುವರಿಸಲಿದ್ದೇನೆ.
Last Updated 28 ಡಿಸೆಂಬರ್ 2019, 19:30 IST
ಯುವ ಮನಸು; ಹೊಸ ಕನಸು| ದೇಶದ ಭಾವೈಕ್ಯ ಕಾಯಬೇಕು: ಸೌಮ್ಯಾ ರೆಡ್ಡಿ

ಯುವ ಮನಸು; ಹೊಸ ಕನಸು| ಸತ್ಯಾನ್ವೇಷಣೆಯೇ ಗುರಿಯಾಗಲಿ; ಲೇಖಕಿ ಸಹನಾ ವಿಜಯಕುಮಾರ್‌

ಹೊಸ ಕ್ಯಾಲೆಂಡರ್ ವರ್ಷ ಆರಂಭವಾಗಲಿದೆ. ದೇಶದಲ್ಲಿ ಬದಲಾವಣೆಯ ಹೊಸ ಪರ್ವವೂ ಆರಂಭಗೊಂಡಿದೆ. ವೈಯಕ್ತಿಕ ಮಟ್ಟದಲ್ಲಿ ಹೇಳುವುದಾದರೆ ನನ್ನ ಮೂರನೆಯ ಕಾದಂಬರಿ ಅಚ್ಚಿಗೆ ಸಿದ್ಧವಾಗಿದೆ ಎಂಬುದು ಹರುಷ ನೀಡುತ್ತಿರುವ ಸಂಗತಿ. ಈ ವಸ್ತುವೂ ಅಧ್ಯಯನ, ಪ್ರವಾಸಗಳನ್ನು ಬೇಡಿದ್ದು, ‘ಕಶೀರ’ಕ್ಕಿಂತ ಭಿನ್ನವಾದ ಕಥಾಹಂದರವನ್ನು ಹೊಂದಿದೆ.
Last Updated 28 ಡಿಸೆಂಬರ್ 2019, 19:30 IST
ಯುವ ಮನಸು; ಹೊಸ ಕನಸು| ಸತ್ಯಾನ್ವೇಷಣೆಯೇ ಗುರಿಯಾಗಲಿ; ಲೇಖಕಿ ಸಹನಾ ವಿಜಯಕುಮಾರ್‌
ADVERTISEMENT

ಯುವ ಮನಸು; ಹೊಸ ಕನಸು| ಬಹುಬೆಳೆ ಕೃಷಿ ನನ್ನ ಈ ವರ್ಷದ ಆದ್ಯತೆ

ಪದೇ ಪದೇ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುವ ಊರು ನನ್ನದು. ಕೆಲವು ವರ್ಷಗಳಿಂದ ಕಾಲುವೆಯಲ್ಲಿ ನೀರು ಹರಿಯುತ್ತಿದೆ ಎಂಬ ಸಮಾಧಾನ ಇದ್ದರೂ ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾಗಲು ಮಳೆ ಬರಬೇಕು ತಾನೇ? ಅಧಿಕ ನೀರಿನಿಂದ ಭತ್ತ ಬೆಳೆಯುವ ನಮ್ಮ ಪ್ರದೇಶದ ರೈತರು ಮಾರುಕಟ್ಟೆ ಸಮಸ್ಯೆಗೆ ಸಿಲುಕುತ್ತಾರೆ. ಭತ್ತ ಕಟಾವಾದಾಗ ಸಿಕ್ಕ ದರಕ್ಕೆ ಮಾರಾಟ ಮಾಡುತ್ತಾರೆ. ಆದರೆ, ಆ ಜಾಯಮಾನ ನನ್ನದಲ್ಲ. ನನ್ನದೇನಿದ್ದರೂ ಗ್ರಾಹಕರ ಜತೆ ನೇರ ವಹಿವಾಟು.
Last Updated 28 ಡಿಸೆಂಬರ್ 2019, 19:30 IST
ಯುವ ಮನಸು; ಹೊಸ ಕನಸು| ಬಹುಬೆಳೆ ಕೃಷಿ ನನ್ನ ಈ ವರ್ಷದ ಆದ್ಯತೆ

ಯುವ ಮನಸು; ಹೊಸ ಕನಸು| ನಾಡಿನ ಅಭಿವೃದ್ಧಿಯೇ ನನ್ನ ಕನಸು: ಬಿ.ವೈ ವಿಜಯೇಂದ್ರ

ಹೊಸ ವರ್ಷದಲ್ಲಿ ಕನ್ನಡ ನಾಡಿನ ಎಲ್ಲ ಪ್ರದೇಶಗಳ, ವರ್ಗಗಳ ಜನರ ಸಮಾನ ಅಭಿವೃದ್ಧಿ ಆಗಬೇಕು ಎಂಬುದು ನನ್ನ ಕನಸು. ನೈಜ ‘ಕಲ್ಯಾಣ ರಾಜ್ಯ’ದ (welfare state) ಪರಿಕಲ್ಪನೆಯೇ ಅದಲ್ಲವೇ?
Last Updated 28 ಡಿಸೆಂಬರ್ 2019, 19:30 IST
ಯುವ ಮನಸು; ಹೊಸ ಕನಸು| ನಾಡಿನ ಅಭಿವೃದ್ಧಿಯೇ ನನ್ನ ಕನಸು: ಬಿ.ವೈ ವಿಜಯೇಂದ್ರ
ADVERTISEMENT
ADVERTISEMENT
ADVERTISEMENT