ಮಂಗಳವಾರ, ಜನವರಿ 21, 2020
28 °C

ಬರಲಿದೆ ಆಂಡ್ರಾಯ್ಡ್‌ 10 ಒಎಸ್‌ನ ಮೂರು ಹೊಸ ನೋಕಿಯಾ ಫೋನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಎಚ್‌ಎಂಡಿ ಗ್ಲೋಬಲ್‌ ಕಂಪನಿಯು ಆಂಡ್ರಾಯ್ಡ್‌ 10 ಒಎಸ್‌ ಒಳಗೊಂಡಿರುವ ನೋಕಿಯಾ 6.1 ಪ್ಲಸ್‌, 7 ಪ್ಲಸ್‌ ಮತ್ತು 6.1 ಫೋನ್‌ಗಳನ್ನು ಜನವರಿಯಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

ಈಗಾಗಲೇ ನೋಕಿಯಾ 7.1 ಮತ್ತು ನೋಕಿಯಾ 8.1 ಫೋನ್‌ಗಳು ಆಂಡ್ರಾಯ್ಡ್‌ 10ಗೆ ಅಪ್‌ಡೇಟ್‌ ಆಗಿವೆ. ಹೀಗಾಗಿ ಕಂಪನಿಯ ಒಟ್ಟಾರೆ ಐದು ಫೋನ್‌ಗಳು ಆಂಡ್ರಾಯ್ಡ್‌ 10 ಒಎಸ್‌ ಒಳಗೊಂಡಂತಾಗಿದೆ.

ತನ್ನ ಹ್ಯಾಂಡ್‌ಸೆಟ್‌ಗಳಿಗೆ ಹೊಸ ಒಎಸ್‌ ಅಪ್‌ಡೇಟ್ ಮಾಡುವುದರಲ್ಲಿ ಕಂಪನಿಯು ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಈಚೆಗೆ ಬಿಡುಗಡೆ ಆಗಿರುವ ಆಂಡ್ರಾಯ್ಡ್‌ 10 ಒಎಸ್‌ ಆಧಾರಿತ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಮೂರು ಮೊಬೈಲ್‌ಗಳಿಗೆ ಮೂರು ವರ್ಷಗಳವರೆಗೆ ಪ್ರತಿ ತಿಂಗಳು ಸುರಕ್ಷತಾ ಅಪ್‌ಡೇಟ್‌ ಹಾಗೂ ಎರಡು ವರ್ಷಗಳವರೆಗೆ ಒಎಸ್‌ ಮೇಲ್ದರ್ಜೆಗೇರಿಸುವ ಭರವಸೆಯನ್ನು ಕಂಪನಿ ನೀಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು