ಗುರುವಾರ , ಆಗಸ್ಟ್ 18, 2022
26 °C

‘ಬ್ಯಾಕ್ ಟು ಸ್ಕೂಲ್‘ ಆಫರ್ ಘೋಷಣೆ ಮಾಡಿದ ಆ್ಯಪಲ್‌: ಕೊಡುಗೆ, ರಿಯಾಯಿತಿ ಮಾಹಿತಿ..

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಿ ಶಾಲಾ–ಕಾಲೇಜುಗಳು ಬಾಗಿಲು ತೆರೆಯುತ್ತಿದ್ದಂತೆ, ಆ್ಯಪಲ್‌ ಕಂಪನಿಯು ‘ಬ್ಯಾಕ್‌ ಟು ಸ್ಕೂಲ್‌–2022‘ ಅಭಿಯಾನ ಘೋಷಣೆ ಮಾಡಿದೆ.

ಆ್ಯಪಲ್‌ ಕಂಪನಿಯು ಗ್ರಾಹಕರಿಗೆ ಆನ್‌ಲೈನ್‌ ಸ್ಟೋರ್‌ ಮೂಲಕ ಮ್ಯಾಕ್‌ಬುಕ್‌ಗಳು ಮತ್ತು ಐಪ್ಯಾಡ್‌ಗಳ ಮೇಲೆ ಆಕರ್ಷಕ ರಿಯಾಯಿತಿ ನೀಡುತ್ತಿದೆ. ಅಲ್ಲದೆ ಗ್ರಾಹಕರಿಗೆ 6 ತಿಂಗಳವರೆಗೆ ಆ್ಯಪಲ್‌ ಮ್ಯೂಸಿಕ್‌ ಚಂದಾದಾರಿಕೆ ಜೊತೆಗೆ ಉಚಿತ ಏರ್‌ಪಾಡ್‌ಗಳನ್ನು ನೀಡುತ್ತಿದೆ. ಏರ್ಪಪಾಡ್‌ಗಳನ್ನು ಇಷ್ಟಪಡದವರು ₹ 6,400ರ ಏರ್‌ಪಾಡ್‌–3 (ಜನರೇಶನ್‌–3) ಹಾಗೂ ₹ 12,200ರ ಏರ್‌ಪಾಡ್‌ ಪ್ರೋಗೆ ಅಪ್‌ಗ್ರೇಡ್‌ ಆಗಬಹುದು ಎಂದು ಕಂಪನಿ ತಿಳಿಸಿದೆ.  

ಹೊಸ ಐಪ್ಯಾಡ್‌ ಏರ್‌ (5ನೇ ಜನರೇಶನ್‌), 11 ಇಂಚಿನ ಐಪ್ಯಾಡ್ ಪ್ರೊ (3ನೇ ಜನರೇಶನ್‌) ಮತ್ತು 12.9 ಇಂಚಿನ ಐಪ್ಯಾಡ್ ಪ್ರೊ (5ನೇ ಜನರೇಶನ್‌) ಹಾಗೂ ಪಿಸಿಗಳಲ್ಲಿ ಮ್ಯಾಕ್‌ಬುಕ್‌ ಏರ್‌ಎಂ1, ಮ್ಯಾಕ್‌ಬುಕ್‌ ಏರ್‌ಎಂ2(ಜುಲೈನಲ್ಲಿ ಲಭ್ಯವಿದೆ), ಮ್ಯಾಕ್‌ಬುಕ್‌ ಪ್ರೊ ಮತ್ತು 24 ಇಂಚಿನ ಐಮ್ಯಾಕ್‌ಗಳಿಗೆ ‘ಬ್ಯಾಕ್‌ ಟು ಸ್ಕೂಲ್‌–2022‘ ಅಭಿಯಾನದಲ್ಲಿ ರಿಯಾಯಿತಿ ಸಿಗಲಿದೆ. ಈ ಮೇಲಿನ ಸಾಧನಗಳಿಗೆ ಮಾತ್ರ ಆಪರ್‌ ಲಭ್ಯವಿದೆ. 

ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ವಿಶ್ವವಿದ್ಯಾಲಯಗಳ ಸಿಬ್ಬಂದಿ ಕಂಪನಿಯ ರಿಯಾಯಿತಿ ಕೊಡುಗೆಗಳನ್ನು ಪಡೆಯಬಹುದು. ಇವರು ತಮ್ಮ ಶೈಕ್ಷಣಿಕ ಸಂಸ್ಥೆಯ ಐಡಿ ಕಾರ್ಡ್‌ ಹೊಂದಿರಬೇಕು. ಆಸಕ್ತ ಗ್ರಾಹಕರು ಶಿಕ್ಷಣ ರಿಯಾಯಿತಿ ಕೊಡುಗೆಯನ್ನು ಹೇಗೆ ಪಡೆಯಬಹುದು ಎಂಬುದನ್ನು ಆ್ಯಪಲ್‌ ಆನ್‌ಲೈನ್‌ ಸ್ಟೋರ್‌ ಮೂಲಕ ಪರಿಶೀಲಿಸಬಹುದು.

ಆ್ಯಪಲ್‌ ಐಪ್ಯಾಡ್‌ ಏರ್‌ (5ನೇ ಜನರೇಶನ್‌) ಪಿಸಿ ಗ್ರೇಡ್‌ (ಎಂ1 ಸಿಲಿಕಾನ್‌) ಹೊಂದಿದೆ. ಇದು 8 ಕೋರ್‌ ಸಿಪಿಯು ಹೊಂದಿದ್ದು ಶೇ. 60ರಷ್ಟು ವೇಗದಲ್ಲಿ ಕೆಲಸ ಮಾಡುತ್ತದೆ. ಉತ್ತಮ ಗ್ರಾಫಿಕ್ಸ್‌ ಕಾರ್ಯವೈಖರಿಯನ್ನು ಹೊಂದಿದೆ. ಹಿಂದಿನ ಐಪ್ಯಾಡ್ ಏರ್‌ಗೆ ಹೋಲಿಕೆ ಮಾಡಿದರೆ ಉತ್ತಮ ಕ್ಷಮತೆ ಹೊಂದಿದೆ. ಇದು ಸಿಪಿಯು ಮತ್ತು ಜಿಪಿಯುನ ಸಂಮಿಳಿತವಾಗಿದ್ದು 4ಕೆ ವಿಡಿಯೊ ಹಾಗೂ ಗೇಮ್‌ಗಳನ್ನು ಆಸ್ವಾದಿಸಬಹುದು. 

ವೈ-ಫೈ ಮಾದರಿಯ ಐಪ್ಯಾಡ್ ಏರ್‌ಗಳ ಆರಂಭಿಕ ಬೆಲೆ ₹ 54,900 ಇರಲಿದೆ. ವೈ-ಫೈ ಪ್ಲಸ್‌ ಸೆಲ್ಯುಲಾರ್ ಮಾಡೆಲ್‌ಗಳು ₹ 68,900ರಿಂದ ಪ್ರಾರಂಭವಾಗುತ್ತದೆ. ಎಂ2 ಸಿಲಿಕಾನ್ ಮಾದರಿಯ ಹೊಸ ಮ್ಯಾಕ್‌ಬುಕ್‌ ಪ್ರೊ ಮತ್ತು ಐಪ್ಯಾಡ್‌ ಏರ್‌ ಅತ್ಯಂತ ಶಕ್ತಿಶಾಲಿ ಪಿಸಿಗಳಾಗಿವೆ. 

ಶಿಕ್ಷಣ ರಿಯಾಯಿತಿಯಲ್ಲಿ ವಿದ್ಯಾರ್ಥಿಗಳಿಗೆ ಮ್ಯಾಕ್‌ಬುಕ್‌ ಏರ್‌ (ಎಂ2) ದರ ₹ 1,19, 900 ಮತ್ತು ₹1,09,900ರಿಂದ ಪ್ರಾರಂಭವಾಗುತ್ತದೆ. ಹಾಗೇ 13 ಇಂಚಿನ ಮ್ಯಾಕ್‌ಬುಕ್‌ ಪ್ರೊ (ಎಂ2) ದರ ₹1,29,900 ಮತ್ತು ₹1,19,900ದಿಂದ ಆರಂಭವಾಗಲಿದೆ ಎಂದು ಆ್ಯಪಲ್‌ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. 

ಮಾಹಿತಿಗೆ ವೆಬ್‌ಸೈಟ್‌:  https://www.myunidays.com/IN/en-IN/partners/appleeducationstore/spotligh...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು