ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

iPhone 14 Plus | ದೇಶದ ಮಾರುಕಟ್ಟೆಗೆ ಇಂದು ಬಿಡುಗಡೆ

ಆ್ಯಪಲ್ ಬಿಡುಗಡೆ ಮಾಡಿರುವ ನೂತನ ಐಫೋನ್ 14 ಪ್ಲಸ್, ಇಂದಿನಿಂದ ಲಭ್ಯ
Last Updated 7 ಅಕ್ಟೋಬರ್ 2022, 4:40 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಪಲ್ ಕಳೆದ ತಿಂಗಳು ಪರಿಚಯಿಸಿದ್ದ ನೂತನ ಆ್ಯಪಲ್ 14 ಪ್ಲಸ್ ದೇಶದ ಮಾರುಕಟ್ಟೆಗೆ ಇಂದು ಬಿಡುಗಡೆಯಾಗಿದೆ.

ಆ್ಯಪಲ್ ಐಫೋನ್ 14 ಸರಣಿಯಲ್ಲಿ ನಾಲ್ಕು ಮಾದರಿಗಳು ಬಿಡುಗಡೆಯಾಗಿದ್ದವು. ಆ್ಯಪಲ್ 14 ಪ್ಲಸ್, ವಿನ್ಯಾಸದಲ್ಲಿ ಐಫೋನ್ 14ನಂತೆಯೇ ಇದ್ದರೂ, 6.7 ಇಂಚಿನ ಡಿಸ್‌ಪ್ಲೇ ಹೊಂದುವ ಮೂಲಕ ಗಮನ ಸೆಳೆದಿದೆ.

ಆ್ಯಪಲ್ 15 ಬಯಾನಿಕ್ ಪ್ರೊಸೆಸರ್ ಹೊಸ ಐಪೋನ್ 14 ಪ್ಲಸ್ ಮಾದರಿಯಲ್ಲಿದೆ. ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್ ವೈಡ್ ಕ್ಯಾಮೆರಾ ಜತೆಗೆ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಇದೆ. ಆ್ಯಕ್ಷನ್ ಮೋಡ್ ವಿಡಿಯೊ ಚಿತ್ರೀಕರಣ ಹೊಸ ಐಫೋನ್ 14 ಸರಣಿಯ ವಿಶೇಷತೆಯಾಗಿದೆ.

ಐಪೋನ್ 14 ಪ್ಲಸ್‌ನಲ್ಲಿ 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ಹೊಸ ಐಫೋನ್ 14 ಪ್ಲಸ್, ನೀಲಿ, ನೇರಳೆ, ಮಿಡ್‌ನೈಟ್ ಬ್ಲ್ಯಾಕ್, ಸ್ಟಾರ್‌ಲೈಟ್ ಮತ್ತು ಪ್ರಾಡಕ್ಟ್ ರೆಡ್ ಬಣ್ಣದಲ್ಲಿ ದೊರೆಯಲಿದೆ.

ಬೆಲೆ ವಿವರ
ಐಫೋನ್ 14 ಪ್ಲಸ್‌ 128GBಬೆಲೆ ಭಾರತದಲ್ಲಿ ₹89,900 ಆರಂಭವಾಗಲಿದೆ.
iPhone 14 Plus 256gb ₹99900
iPhone 14 Plus 512gb ₹119000.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT