ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Apple iPhone: ದೇಶದಲ್ಲಿ ಹೊಸ ಐಪೋನ್ 14 ಸರಣಿ ಮಾರಾಟ ಆರಂಭ: ಇಲ್ಲಿದೆ ಆಫರ್ ವಿವರ

ಐಫೋನ್ 14 ಸರಣಿಯಲ್ಲಿ ನಾಲ್ಕು ಮಾದರಿಗಳು ದೇಶದಲ್ಲಿ ಬಿಡುಗಡೆ
Last Updated 16 ಸೆಪ್ಟೆಂಬರ್ 2022, 11:24 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಪಲ್ ನೂತನ ಸರಣಿಯ ಸ್ಮಾರ್ಟ್‌ಫೋನ್‌ ಐಫೋನ್ 14 ದೇಶದಲ್ಲಿ ಬಿಡುಗಡೆಯಾಗಿದೆ. ಈ ಬಾರಿ ಐಪೋನ್ 14, 14 ಪ್ಲಸ್ ಮತ್ತು ಪ್ರೊ ಸರಣಿಯಲ್ಲಿ ಐಫೋನ್ 14 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಶುಕ್ರವಾರದಿಂದ ದೇಶದಲ್ಲಿ ಆ್ಯಪಲ್ ಐಫೋನ್ 14, ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಖರೀದಿಗೆ ಲಭ್ಯವಾಗುತ್ತಿದೆ. ಪ್ರಿ ಬುಕಿಂಗ್ ಮಾಡಿರುವ ಗ್ರಾಹಕರಿಗೆ ಶುಕ್ರವಾರವೇ ಫೋನ್ ಲಭ್ಯವಾಗಿದೆ.

ಐಫೋನ್ 14 ಪ್ಲಸ್ ಅಕ್ಟೋಬರ್ 7ರಿಂದ ಲಭ್ಯವಾಗಲಿದೆ ಎಂದು ಆ್ಯಪಲ್ ಹೇಳಿದೆ.

ಬೆಲೆ ವಿವರ
ಐಫೋನ್ 14 ಬೆಲೆಯು ಭಾರತದಲ್ಲಿ ₹79,900 ಆರಂಭವಾಗಲಿದೆ.
iPhone 14 256gb ₹89900
iPhone 14 512gb ₹109900

ಐಫೋನ್ 14 ಪ್ಲಸ್‌ ಬೆಲೆ ಭಾರತದಲ್ಲಿ ₹89,900 ಆರಂಭವಾಗಲಿದೆ.
iPhone 14 Plus 256gb ₹ 99900
iPhone 14 Plus 512gb ₹ 119000

ಐಫೋನ್‌ 14 ಪ್ರೊ ಬೆಲೆ ₹1,29,900 ರಿಂದ ಆರಂಭವಾಗಲಿದೆ.
iPhone 14 Pro 256gb ₹ 139900
iPhone 14 Pro 512gb ₹ 159900
iPhone 14 Pro 1TB ₹ 179900

ಐಫೋನ್‌ 14 ಪ್ರೊ ಮ್ಯಾಕ್ಸ್‌ ಬೆಲೆ ₹1,39,900 ರಿಂದ ಆರಂಭ
iPhone 14 Pro Max 256gb ₹149900
iPhone 14 Pro Max 512gb ₹169900
iPhone 14 Pro Max 1TB ₹189900

ಎಚ್‌ಡಿಎಫ್‌ಸಿ ಆಫರ್
ಆ್ಯಪಲ್ ಸ್ಟೋರ್ ಇಂಡಿಯಾ ಆನ್‌ಲೈನ್ ಮೂಲಕ ಖರೀದಿಸಿದರೆ ಎಚ್‌ಡಿಎಫ್‌ಸಿ ಕಾರ್ಡ್ ಬಳಕೆಗೆ ₹6000 ವರೆಗೆ ಕ್ಯಾಶ್‌ಬ್ಯಾಕ್ ಕೊಡುಗೆ ದೊರೆಯಲಿದೆ ಎಂದು ಕಂಪನಿ ಹೇಳಿದೆ. ಇತರ ಸ್ಟೋರ್‌ಗಳಲ್ಲಿ ₹5000 ವರೆಗೆ ಕ್ಯಾಶ್‌ಬ್ಯಾಕ್ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT